ಸಹರಾ ಹೂಡಿಕೆದಾರರ ಹಣ ವಾಪಸಾತಿಗೆ ಸೆಬಿ ಪ್ರಯತ್ನ

ಗುರುವಾರ, 18 ಡಿಸೆಂಬರ್ 2014 (17:02 IST)
ಹಣವಾಪಸಾತಿಗೆ ಅರ್ಹತೆ ಪಡೆದ ಸಹರಾ ಹೂಡಿಕೆದಾರರನ್ನು ಗುರುತಿಸುವ ಹೊಸ ಪ್ರಯತ್ನವಾಗಿ, ಮಾರುಕಟ್ಟೆ ನಿಯಂತ್ರಕ ಸೆಬಿ ಬಾಂಡ್‌ದಾರರಿಗೆ ಮುಂದಿನ ತಿಂಗಳೊಳಗೆ ತಮ್ಮ ಹೂಡಿಕೆಗಳ ದೃಢೀಕರಣದೊಂದಿಗೆ ಕ್ಲೇಮುಗಳನ್ನು ಸಲ್ಲಿಸುವಂತೆ ತಿಳಿಸಿದೆ.

ಸೆಬಿ ಆಗಸ್ಟ್‌ನಲ್ಲಿ ಕೂಡ ಅರ್ಹ ಬಾಂಡ್‌ದಾರರು ರಿಫಂಡ್ ಕ್ಲೇಮುಗಳನ್ನು 2014 ಸೆ.30ರೊಳಗೆ ಸಲ್ಲಿಸುವಂತೆ ತಿಳಿಸಿದೆ. ಆ ಪ್ರಕ್ರಿಯೆಯಲ್ಲಿ ಎರಡು ಸಹರಾ ಕಂಪನಿಗಳ ಬಾಂಡುದಾರರಿಂದ 4900 ರೀಫಂಡ್ ಕ್ಲೇಮುಗಳನ್ನು ಸ್ವೀಕರಿಸಿದ್ದಾಗಿ ಸೆಬಿ ತಿಳಿಸಿದೆ. ಸಹರಾ ಇಂಡಿಯಾ ರಿಯಲ್ ಎಸ್ಟೇಟ್ ಮತ್ತು ಸಹರಾ ಗೃಹನಿರ್ಮಾಣ ಸಂಸ್ಥೆ ಮೂರು ಕೋಟಿ ಹೂಡಿಕೆದಾರರಿಂದ 24,000 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು.

ಕಡೆದಿನಾಂಕದೊಳಗೆ ರೀಫಂಡ್ ಕ್ಲೇಮುಗಳನ್ನು ಸಲ್ಲಿಸದಿರುವ ಬಾಂಡುದಾರರ ಹಿತಾಸಕ್ತಿ ದೃಷ್ಟಿಯಿಂದ ಈ ಜಾಹೀರಾತನ್ನು ಪುನಃ ನೀಡಲಾಗಿದೆ ಎಂದು ಸೆಬಿ ತಿಳಿಸಿದೆ.

ಸಹರಾ ಸಂಬಂಧಿಸಿದ ಬಾಂಡುದಾರರಿಗೆ ಶೇ. 93 ಹಾಕಿಹಣವನ್ನು ಮರುಪಾವತಿ ಮಾಡಿರುವುದಾಗಿ ಪ್ರತಿಪಾದಿಸಿದ್ದು, ಉಳಿದಿರುವ ಹಣ ಕೇವಲ 2500 ಕೋಟಿ ರೂ.ಗಳು ಎಂದು ತಿಳಿಸಿದೆ. 2012ರಲ್ಲಿ 5120 ಕೋಟಿ ರೂ.ಗಳನ್ನು  ಸುಪ್ರೀಕೋರ್ಟ್ ಆದೇಶದಂತೆ ಸೆಬಿಯಲ್ಲಿ ಡಿಪಾಸಿಟ್ ಮಾಡಿದೆ.
 

ವೆಬ್ದುನಿಯಾವನ್ನು ಓದಿ