ಈ ಫೋನ್‌ಗಳು ಇನ್ನು ಮುಂದೆ ಕೆಲಸ ಮಾಡಲ್ಲ

ಸೋಮವಾರ, 12 ಡಿಸೆಂಬರ್ 2016 (12:13 IST)
ಗೆಲಾಕ್ಸಿ ನೋಟ್ 7‍ನಲ್ಲಿನ ಬ್ಯಾಟರಿ ಲೋಪದ ಕಾರಣ ಸ್ಯಾಮ್‌ಸಂಗ್ ಕಂಪನಿ ಸಾಕಷ್ಟು ನಷ್ಟ ಅನುಭವಿಸಿತು. ಬ್ಯಾಟರಿಗಳಲ್ಲಿ ಬಿಸಿಯಾಗಿ ಸ್ಫೋಟಗೊಳ್ಳುತ್ತಿದ್ದವು. ಹಾಗಾಗಿ ಆ ಫೋನ್‍ಗಳನ್ನು ಕಂಪನಿ ವಾಪಸ್ ಪಡೆಯಿತು.
 
ವಾಪಸ್ ಕೊಟ್ಟವರಿಗೆ ಬೇರೆ ಮಾಡೆಲ್ ಫೋನ್ ತೆಗೆದುಕೊಳ್ಳಲು, ಹಣ ವಾಪಸ್ ಕೊಡುವ ಅವಕಾಶ ಕಲ್ಪಿಸಿತು. ಆದರೂ ಇದುವರೆಗೂ ಪೂರ್ತಿ ರಿಕವರಿ ಆಗಿಲ್ಲವಂತೆ. ಒಟ್ಟಾರೆ ಫೋನ್‌ಗಳಲ್ಲಿ ಶೇ.87ರಷ್ಟೇ ವಾಪಸ್ ಬಂದಿವೆ. 
 
ಆದರೆ ಅಮೆರಿಕಾದಲ್ಲಿ ಮಾತ್ರ ಶೇ.93ರಷ್ಟು ರಿಕವರಿ ಆಗಿದೆ. ಇನ್ನು ಬಳಕೆದಾರರ ಬಳಿಯೇ ಉಳಿದಿರುವ ಫೋನ್‌ಗಳನ್ನು ವಾಪಸ್ ತರಿಸಿಕೊಳ್ಳಲು ಸ್ಯಾಮ್‍ಸಂಗ್ ಕಂಪನಿ ಮುಂದಾಗಿದೆ. ಸಾಫ್ಟ್‌ವೇರ್ ಅಪ್‌ಡೇಟ್ ಕಳುಹಿಸಿ ನೋಟ್ 7 ಫೋನ್‌ಗಳು ಕೆಲಸ ಮಾಡದಂತೆ ಮಾಡಲು ಮುಂದಾಗಿದ್ದು ವಾಪಸ್ ಕೊಡುವಂತೆ ವಿನಂತಿಸಿಕೊಂಡಿದೆ.
 
ಮೊದಲ ಭಾಗವಾಗಿ ಅಮೆರಿಕಾದಲ್ಲಿ ಈ ತಿಂಗಳ 19ರಿಂದ ಸಾಫ್ಟ್‌ವೇರ್ ಕಳುಹಿಸಲಿದೆ. ಆದರೆ ಅಮೆರಿಕಾದ ಪ್ರಮುಖ ನೆಟ್‌ವರ್ಕ್ ಪ್ರೊವೆಡರ್ ವೆರಿಜೋನ್ ಮಾತ್ರ ಈ ಅಪ್‌ಡೇಟನ್ನು ತಮ್ಮ ಬಳಕೆದಾರರಿಗೆ ಕಳುಹಿಸಲು ನಿರಾಕರಿಸುತ್ತಿದೆ. ನಮ್ಮ ಬಳಕೆದಾರರು ಎಲ್ಲಾದರು ಹೊರಗಡೆ ಇದ್ದಾಗ ಫೋನ್ ಕೆಲಸ ಮಾಡದಂತೆ ಮಾಡಿದರೆ ಅವರಿಗೆ ತೊಂದರೆಯಾಗುತ್ತದೆ ಎಂದಿದೆ. ಆದರೆ ಬೇರೆ ಸಂಸ್ಥೆಗಳು ಮಾತ್ರ ಅಂಗೀಕರಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ