ದೊಡ್ಡ ಫೋನುಗಳ ಸಮರದಲ್ಲಿ ಸೋತ ಸ್ಯಾಮ್‌ಸಂಗ್

ಶುಕ್ರವಾರ, 30 ಜನವರಿ 2015 (19:56 IST)
ಕಳೆದ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್ ದೊಡ್ಡ ಫೋನುಗಳ ಸಮರದಲ್ಲಿ ಸೋಲನ್ನಪ್ಪಿದೆ. ಆಪಲ್  ಕಾಪಿಕ್ಯಾಟ್ ದೊಡ್ಡ ಐಫೋನ್‌‌ ಖರೀದಿಗೆ ಚೀನಾದ ಮಾರುಕಟ್ಟೆಯಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ.
 
ಸ್ಮಾರ್ಟ್‌ಫೋನ್‌ಗಳಿಗೆ ವಿಶ್ವದ ಅತೀ ದೊಡ್ಡ ಮಾರುಕಟ್ಟೆ ಚೀನಾದಲ್ಲಿ  ಸ್ಯಾಮ್‌ಸಂಗ್ ಕುಸಿತ ಇದರಿಂದ ಸ್ಪಷ್ಟವಾಗಿ ಗೋಚರಿಸಿದೆ. ಸ್ಯಾಮ್‌ಸಂಗ್ ದೌರ್ಬಲ್ಯದಿಂದಾಗಿ 2013ರಲ್ಲಿ ಮೂರನೇ ಒಂದರಷ್ಟಿದ್ದ ಸ್ಯಾಮ್‌ಸಂಗ್ ಮಾರಾಟದ ಪಾಲು ನಾಲ್ಕನೇ ಒಂದಕ್ಕೆ ಈ ವರ್ಷ ಕುಸಿದಿದೆ.
 
 ಸ್ಯಾಮ್‌ಸಂಗ್ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಪಲ್ ಸಂಸ್ಥೆ ಕೂಡ ಕೊಡುಗೆ ನೀಡಿದೆ. ಆಪಲ್ ದೊಡ್ಡ ಸ್ಕ್ರೀನ್‌ಗಳ ಐಫೋನ್‌ಗೆ ಚಾಲನೆ ನೀಡುವ ಮೂಲಕ ಸ್ಯಾಮ್‌ಸಂಗ್‌ಗೆ ಸೆಡ್ಡು ಹೊಡೆದಿದೆ. ಸ್ಯಾಮ್‌ಸಂಗ್ ಈಗಾಗಲೇ ಕಡಿಮೆ ದರ್ಜೆಯ ಫೋನ್‌ಗಳಲ್ಲಿ ಕೂಡ ಚೀನಾದ ಕ್ಸಿಯಾವೋಮಿ ಜೊತೆ ಪೈಪೋಟಿಗಿಳಿದಿದೆ.
 
 ಕಳೆದ ವರ್ಷ ಎರಡನೇ ತ್ರೈಮಾಸಿಕದಲ್ಲಿ ಕ್ಸಿಯಾವೋಮಿ ಸ್ಯಾಮ್‌ಸಂಗ್‌ನನ್ನು ಮೀರಿಸಿ ಚೀನಾದ ಅತೀ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಕೆ ಸಂಸ್ಥೆಯಾಗಿ ರೂಪುಗೊಂಡಿದೆ. 
 ಸ್ಯಾಮ್ಸಂಗ್ ಈಗ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನ ಪಡೆದಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ ಆಪಲ್ ಅಗ್ರಸ್ಥಾನಕ್ಕೆ ಅಡಿಇಟ್ಟಿದೆ ಎಂದು ಸಂಶೋಧನೆ ಕಂಪನಿ ಕೆನೆಲಿಸ್ ತಿಳಿಸಿದೆ.

 
 ಅದರ ದೊಡ್ಡ ಐಫೋನ್‌ಗಳ ನೆರವಿನಿಂದ ಆಪಲ್ ಕಳೆದ ತ್ರೈಮಾಸಿಕದಲ್ಲಿ ದಾಖಲೆಯ 74.5 ದಶಲಕ್ಷ ಐಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಜಗತ್ತಿನ ಅತೀ ಲಾಭದಾಯಕ ಕಂಪನಿಯಾಗಿ ಮಾರ್ಪಟ್ಟಿದೆ.

ವೆಬ್ದುನಿಯಾವನ್ನು ಓದಿ