ಎಸ್‌ಬಿಐ, ಐಸಿಐಸಿಐ ಗೃಹ ಸಾಲದ ಬಡ್ಡಿ ದರ ಶೇ. 9.4ಕ್ಕೆ ಇಳಿಕೆ

ಶುಕ್ರವಾರ, 8 ಏಪ್ರಿಲ್ 2016 (11:05 IST)
ಪ್ರಮುಖ ಬ್ಯಾಂಕುಗಳಾದ ಎಸ್‌ಬಿಐ ಮತ್ತು ಐಸಿಐಸಿಐ ಗುರುವಾರ ಗೃಹ ಸಾಲದ ಬಡ್ಡಿ ದರಗಳನ್ನು ಶೇ. 0.10ರಷ್ಟು ಕಡಿತ ಮಾಡಿ ಶೇ. 9.4 ಕ್ಕೆ ಇಳಿಸಿದೆ. ಆರ್‌ಬಿಐ ಕಡ್ಡಾಯ ಮಾಡಿರುವ ಹೊಸ ಬಡ್ಡಿ ದರ ಲೆಕ್ಕಾಚಾರ ವ್ಯವಸ್ಥೆ ಅನುಷ್ಠಾನದಿಂದ ಈ ಬೆಳವಣಿಗೆ ಉಂಟಾಗಿದೆ.
 
 ಇತರೆ ಬ್ಯಾಂಕುಗಳ ಸಾಲದರಗಳು ಕೂಡ ಇಳಿಮುಖವಾಗುವ ಸಾಧ್ಯತೆಯಿದೆ.  ಏಪ್ರಿಲ್ ಒಂದರಿಂದ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರದ ಸಾಲ ದರವನ್ನು ಜಾರಿಗೆ ತಂದಿರುವುದರಿಂದ ಈ ಬೆಳವಣಿಗೆ ಉಂಟಾಗಿದೆ.
 
 ಬ್ಯಾಂಕುಗಳು ಶೇ. 0.25ರಷ್ಟು ರೆಪೊ ದರವನ್ನು ಗ್ರಾಹಕರಿಗೆ ವರ್ಗಾಯಿಸಿದರೆ,  ಸಾಲಗಾರರಿಗೆ ವಿಧಿಸುವ ಬಡ್ಡಿ ದರಗಳು ಕೂಡ ಮತ್ತಷ್ಟು ಇಳಿಮುಖವಾಗಬಹುದು. 
 ಗೃಹಸಾಲ ಬಡ್ಡಿದರವನ್ನು ಶೇ. 9.45ಕ್ಕೆ ನಿಗದಿ ಮಾಡಿರುವುದಾಗಿ ಎಸ್‌ಬಿಐ ತಿಳಿಸಿದೆ. ಇದು ಅದರ ಒಂದು ವರ್ಷದ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಆಧಾರದ ಸಾಲ ದರವಾದ 9.20ಕ್ಕಿಂತ ಶೇ. 0.25ರಷ್ಟು ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ