ಮದ್ಯದೊರೆ ಮಲ್ಯ ಜೀವನದ ಏರಿಳಿತಗಳು

ಮಂಗಳವಾರ, 8 ಮಾರ್ಚ್ 2016 (15:32 IST)
ನವದೆಹಲಿ‌: ಸದ್ಯ ದಿವಾಳಿ ಹೊಂದಿರುವ ಖ್ಯಾತ ಉದ್ಯಮಿ ವಿಜಯ್ ಮಲ್ಯ, ಭಾರತ ಬಿಡದಂತೆ ತಡೆ ಕೋರಿ ಎಸ್‌ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳು ಒಕ್ಕೂಟ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಈ ಮನವಿಯನ್ನು ಸ್ವೀಕರಿಸಿರುವ ಸುಪ್ರೀಂ ನಾಳೆ ಈ ಕುರಿತು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. 
ಸಾರ್ವಜನಿಕ ವಲಯದ ಬ್ಯಾಂಕುಗಳು ಪರವಾಗಿ ಕೋರ್ಟ್‌ಗೆ ಹಾಜರಾಗಲಿರುವ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ತುರ್ತು ವಿಚಾರಣೆ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
 
ಎಸ್‌ಬಿಐ ಸೇರಿದಂತೆ, ಮಲ್ಯ ಸಾಲ ಮರುಪಾವತಿಯನ್ನು ಉಳಿಸಿಕೊಂಡಿರುವ 17 ವಿವಿಧ ಬ್ಯಾಂಕುಗಳು ಕೋರ್ಟ್ ಮೆಟ್ಟಿಲೇರಿವೆ. ಈ ಬ್ಯಾಂಕುಗಳಲ್ಲಿ ಮದ್ಯದ ದೊರೆ ಸಾವಿರಾರಿ ಕೋಟಿಯಷ್ಟು ಸಾಲ ಪಡೆದಿದ್ದಾರೆಂದು ಮುಕುಲ್ ರೋಹಟ್ಗಿ  ತಿಳಿಸಿದ್ದಾರೆ.
 
ಎಸ್‌ಬಿಐ ದಾಖಲಿಸಿದ ಹಣ ದುರುಪಯೋಗ ದೂರು ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ ದೂರುಗಳು ಇತ್ಯರ್ಥವಾಗುವವರೆಗೆ ಯುಬಿ ಕಂಪೆನಿ ಮುಖ್ಯಸ್ಥ ಡಿಯಾಗೋ ಅವರಿಂದ ವಿಜಯ್ ಮಲ್ಯ 515 ಕೋಟಿ ರೂಪಾಯಿ ಹಣ ಪಡೆಯುವಂತಿಲ್ಲ ಎಂದು ಸಾಲ ವಸೂಲಾತಿ ಪ್ರಾಧಿಕಾರ ಕಟ್ಟು ನಿಟ್ಟಿನ ಆದೇಶ ನೀಡಿದೆ. 

ವೆಬ್ದುನಿಯಾವನ್ನು ಓದಿ