ಏಷ್ಯಾ ಶೇರುಪೇಟೆಗಳ ದುರ್ಬಲ ವಹಿವಾಟಿನಿಂದ ಸೂಚ್ಯಂಕ ಕುಸಿತ

ಮಂಗಳವಾರ, 24 ನವೆಂಬರ್ 2015 (13:07 IST)
ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟು ದೇಶಿಯ ಶೇರುಪೇಟೆಯ ಮೇಲೆ ಪ್ರಭಾವ ಬೀರಿದ್ದು, ಹೂಡಿಕೆದಾರರು ಶೇರುಗಳ ಮಾರಾಟದಲ್ಲಿ ತೊಡಗಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 115 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 49.15 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 115.48 ಪಾಯಿಂಟ್‌ಗಳ ಕುಸಿತ ಕಂಡು 25,703.86 ಅಂಕಗಳಿಗೆ ತಲುಪಿದೆ. 
 
ಎಫ್‌‍ಎಂಸಿಜಿ, ಐಟಿ, ವಾಹನೋದ್ಯಮ ಮತ್ತು ಬಂಡವಾಳ ವಸ್ತುಗಳ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 36.60 ಪಾಯಿಂಟ್‌ಗಳ ಇಳಿಕೆ ಕಂಡು 7,812.65 ಅಂಕಗಳಿಗೆ ತಲುಪಿದೆ. 
 
ನಾಳೆ ಗುರುನಾನಕ ಜಯಂತಿಯಿರುವುದರಿಂದ ಶೇರುಪೇಟೆಗೆ ರಜೆ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಏಷ್ಯಾದ ಶಾಂಘೈ ಶೇರುಪೇಟೆ ಶೇ.0.71 ರಷ್ಟು ಕುಸಿತ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.64 ರಷ್ಟು ಇಳಿಕೆಯಾಗಿದೆ, ನಿಕೈ ಶೇರುಪೇಟೆ ಕೂಡಾ ಶೇ.0.08 ರಷ್ಟು ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ