ಸೆನ್ಸೆಕ್ಸ್: ಭರ್ಜರಿ 294 ಪಾಯಿಂಟ್‌ಗಳ ಚೇತರಿಕೆ ಕಂಡ ಶೇರುಸೂಚ್ಯಂಕ

ಗುರುವಾರ, 18 ಡಿಸೆಂಬರ್ 2014 (15:34 IST)
ಬ್ಯಾಂಕಿಂಗ್ ಕ್ಷೇತ್ರದ ಶೇರುಗಳ ವಹಿವಾಟು ಚೇತರಿಕೆಯಿಂದಾಗಿ ಶೇರುಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಭರ್ಜರಿ 294.47 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಬ್ಯಾಂಕಿಂಗ್, ಬಂಡವಾಳ ವಸ್ತುಗಳು, ಗೃಹೋಪಕರಣ ವಸ್ತುಗಳು, ವಾಹನೋದ್ಯಮ, ಉಕ್ಕು, ಹೆಲ್ತ್‌ಕೇರ್ ಮತ್ತು ತೈಲ ಹಾಗೂ ಅನಿಲ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಭಾರಿ ಏರಿಕೆಯಾಗಿವೆ. 
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 294.47 ಪಾಯಿಂಟ್‌ಗಳ ಏರಿಕೆ ಕಂಡು 27,053.86 ಅಂಶಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 88.85 ಪಾಯಿಂಟ್‌ಗಳ ಏರಿಕೆ ಕಂಡು 8118.65 ಅಂಕಗಳಿಗೆ ತಲುಪಿದೆ.
 
 

ವೆಬ್ದುನಿಯಾವನ್ನು ಓದಿ