ಸೇವಾ ತೆರಿಗೆ ಎಫೆಕ್ಟ್: ದೆಹಲಿ-ಮುಂಬೈ ವಿಮಾನ ಪ್ರಯಾಣ ದರ 150 ರೂ.ಏರಿಕೆ

ಶನಿವಾರ, 28 ಫೆಬ್ರವರಿ 2015 (19:25 IST)
ಮುಂದಿನ ಹಣಕಾಸು ವರ್ಷದಲ್ಲಿ ವಿಮಾನ ಪ್ರಯಾಣ ಸ್ವಲ್ಪಮಟ್ಟಿಗೆ ದುಬಾರಿಯಾಗಲಿದೆ. ಸೇವಾತೆರಿಗೆಯನ್ನು ಶೇ. 12.36ರಿಂದ ಶೇ. 14ಕ್ಕೆ ಹೆಚ್ಚಿಸಿರುವುದರಿಂದ ಈ ಬೆಳವಣಿಗೆ ಉಂಟಾಗಲಿದೆ. 
 
ಸೇವಾ ತೆರಿಗೆ ಹೆಚ್ಚಳದಿಂದ ಟಿಕೆಟ್ ದರದಲ್ಲಿ ಶೇ. 2ರಷ್ಟು ಏರಿಕೆಯಾಗಲಿದೆ ಎಂದು ಏರ್‌ಲೈನ್ಸ್ ಮತ್ತು ಟ್ರಾವಲ್ ಏಜಂಟರು ಹೇಳಿದ್ದಾರೆ.  ಇದರ ಅರ್ಥವೇನೆಂದರೆ 8000 ರೂ. ಪ್ರಯಾಣ ದರದ ದೆಹಲಿ-ಮುಂಬೈ ಟಿಕೆಟ್ 150 ರೂ. ಹೆಚ್ಚಾಗಲಿದೆ. ಅಂದರೆ 8150 ರೂ.ಆಗಲಿದೆ. 
 
 ಅಧಿಕ ಮೂಲ ದರಗಳಿಂದ ಬಿಸಿನೆಸ್ ಮತ್ತು ಪ್ರಥಮ ದರ್ಜೆ ಪ್ರಯಾಣದ ಮೇಲೆ ಪರಿಣಾಮ ಬೀರಲಿದ್ದು, ಹೆಚ್ಚಿನ ಬೆಲೆಏರಿಕೆಗೆ ಕಾರಣವಾಗಲಿದೆ. ಟ್ರಾವಲ್ ಪೋರ್ಟಲ್ ಯಾತ್ರಾ ಅಧ್ಯಕ್ಷ ಶರತ್ ಧಲ್ , ಸೇವಾ ತೆರಿಗೆ ಹೆಚ್ಚಳದಿಂದ ವಿಮಾನ ಪ್ರಯಾಣದರ, ಹೊಟೆಲ್ ಆಹಾರತಿನಿಸುಗಳ ದರ ಮತ್ತು ರಜಾ ಪ್ಯಾಕೇಜ್‌ಗಳ ದರ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ