ಬಜೆಟ್‌ನಲ್ಲಿ ಸೇವಾ ತೆರಿಗೆ ಹೆಚ್ಚಳ: ತಟ್ಟಲಿದೆ ಬೆಲೆ ಏರಿಕೆ ಬಿಸಿ

ಶನಿವಾರ, 28 ಫೆಬ್ರವರಿ 2015 (12:47 IST)
ಅರುಣ್ ಜೇಟ್ಲಿ ಮಂಡಿಸಿದ ಬಜೆಟ್‌ನಲ್ಲಿ ಸೇವಾ ತೆರಿಗೆ ಹೆಚ್ಚಳದಿಂದ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಲಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈ ಸಾಲಿನ ಬಜೆಟ್‌ನಲ್ಲಿ ಸೇವಾ ತೆರಿಗೆ ಶೇ. 12. 36ರಿಂದ ಶೇ. 16ಕ್ಕೆ ಏರಿಕೆಯಾಗಿದೆ.

 ಸೇವಾ ತೆರಿಗೆ ಹೆಚ್ಚಳದಿಂದ ಶಿಕ್ಷಣ, ಸೆಲೂನ್, ಬ್ಯೂಟಿ ಪಾರ್ಲರ್, ಮಸಾಜಿಂಗ್, ಹೊಟೆಲ್ ಆಹಾರ ಎಲ್ಲವೂ ದುಬಾರಿಯಾಗಲಿದೆ. ಹಣ್ಣು ಮತ್ತು ತರಕಾರಿಗಳಿಗೆ ಸೇವಾ ತೆರಿಗೆ ಹೆಚ್ಚಳವಿಲ್ಲ. ಆರೋಗ್ಯ ವಿಮೆಯ ಮಿತಿಯನ್ನು 15ಸಾವಿರದಿಂದ 25 ಸಾವಿರಕ್ಕೆ ಏರಿಕೆಯಾಗಿದೆ.22 ವಿವಿಧ ವಸ್ತುಗಳ ಮೇಲಿನ ಸಾಂಪ್ರದಾಯಿಕ ಸುಂಕ ಕಡಿತವಾಗಲಿದೆ.

 ತಂಬಾಕು,ಸಿಗರೇಟು, ಪಾನ್ ಮಸಾಲ, ಹೊಟೆಲ್ ಆಹಾರ, ಬ್ಯೂಟಿ ಪಾರ್ಲರ್ ದುಬಾರಿಯಾಗಲಿದ್ದು, ಪಾದರಕ್ಷೆಗಳು ಅಗ್ಗವಾಗಲಿದೆ. ಹಣ್ಣು ಮತ್ತು ತರಕಾರಿಗಳಿಗೆ ಸೇವಾ ತೆರಿಗೆ ದರ ಹೆಚ್ಚಳ ಮಾಡಿಲ್ಲವಾದ್ದರಿಂದ ಜನಸಾಮಾನ್ಯರು ದಿನನಿತ್ಯ ಬಳಸುವ ಇವು ಬೆಲೆ ಹೆಚ್ಚಳದ ಬಿಸಿಯಿಂದ ತಪ್ಪಿಸಿಕೊಂಡಿವೆ. 

ವೆಬ್ದುನಿಯಾವನ್ನು ಓದಿ