ಸ್ಕೈಪ್ ಬಳಕೆದಾರರು ಅಮೆರಿಕ, ಕೆನಡಾಗೆ ಉಚಿತ ಕರೆ ಮಾಡಬಹುದು

ಬುಧವಾರ, 17 ಡಿಸೆಂಬರ್ 2014 (18:01 IST)
ಸ್ಕೈಪ್ ಟ್ರಾನ್ಸ್‌ಲೇಟರ್ ಪ್ರಿವ್ಯೂ ಕಾರ್ಯಕ್ರಮ ಪರಿಚಯಿಸಿದ ನಂತರ ಭಾರತದ ಸ್ಕೈಪ್ ಬಳಕೆದಾರರಿಗೆ ಸೀಮಿತ ಅವಧಿಯ ಆಫರ್ ಒಂದನ್ನು ಪ್ರಕಟಿಸಿದ್ದು, ಅಮೆರಿಕ ಅಥವಾ ಕೆನಡಾದ ಲ್ಯಾಂಡ್‌ಲೈನ್ ಅಥವಾ ಮೊಬೈಲ್ ಸಂಖ್ಯೆಗೆ ಉಚಿತವಾಗಿ ಕರೆ ಮಾಡುವ ಸಾಮರ್ಥ್ಯವನ್ನು ನೀಡಿದೆ.

ಹೊಸ ಮತ್ತು ಅಸ್ತಿತ್ವದಲ್ಲಿರುವ ಸ್ಕೈಪ್ ಬಳಕೆದಾರರಿಗೆ 2015ರ ಮಾರ್ಚ್ 1ರವರೆಗೆ ಈ ಆಫರ್ ಚಾಲ್ತಿಯಲ್ಲಿರುತ್ತದೆ. ನೀವು ಕರೆ ಮಾಡುವುದನ್ನು ಬಿಟ್ಟರೆ ಬೇರೇನೂ ಇಲ್ಲ ಎಂದು ಸ್ಕೈಪ್ ಇಂಡಿಯಾ ಹೋಂ ಪೇಜ್ ಹೇಳಿದೆ. ಸ್ಕೈಪ್ ಸೇವೆಗೆ ಹೆಚ್ಚು ಬಳಕೆದಾರರು ಒಳಗೊಳ್ಳುವುದಕ್ಕೆ ಈ ಆಫರ್ ಮಾಡಲಾಗಿದೆ.

ಇ-ವಾಣಿಜ್ಯ ವೆಬ್‌ಸೈಟ್‌ನಲ್ಲಿ ತನ್ನ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳನ್ನು ಮಾರಾಟ ಮಾಡಲು ಅಮೆಜಾನ್ ಇಂಡಿಯಾ ಜೊತೆ ಸಹಯೋಗ ಹೊಂದುವುದಾಗಿ ಮೈಕ್ರೋಸಾಫ್ಟ್ ಪ್ರಕಟಿಸಿದ ಮರುದಿನವೇ ಈ ಆಫರ್  ನೀಡಲಾಗಿದೆ.

ಮೈಕ್ರೋಸಾಫ್ಟ್ ಬ್ರಾಂಡ್ ಸ್ಟೋರ್‌ನಲ್ಲಿ ಲಭ್ಯವಾಗುವ ಉತ್ಪನಗಳು ವಿಂಡೋಸ್, ವಿಂಡೋಸ್ ಫೋನ್, ಲ್ಯಾಪ್‌ಟ್ಯಾಪ್ ಮತ್ತು ಟ್ಯಾಬ್ಲೆಟ್ಸ್ ಮುಂತಾದವು ಲಭ್ಯವಿವೆ.ಇಲ್ಲಿವರೆಗೆ ಕಂಪೆನಿಯು ಈ ಉಪಕರಣಗಳನ್ನು ವ್ಯಾಪಾರಿಗಳ ನೆಟ್‌‌ವರ್ಕ್ ಚಾನೆಲ್‌ನಲ್ಲಿ ಮಾರಾಟ ಮಾಡುತ್ತಿತ್ತು.

ವೆಬ್ದುನಿಯಾವನ್ನು ಓದಿ