ಸಣ್ಣ ಪ್ರಮಾಣದ ಚಹಾ ಬೆಳೆಗಾರರ ಸಹಾಯಕ್ಕೆ ಮೊಬೈಲ್ ಆಪ್

ಶುಕ್ರವಾರ, 13 ಮೇ 2016 (13:11 IST)
ಸಣ್ಣ ಪ್ರಮಾಣದ ಚಹಾ ಬೆಳೆಗಾರರಿಗೆ ಉತ್ತಮ ಕೃಷಿ ಪದ್ಧತಿ ಸಲಹೆ ಒದಗಿಸಲು ಹೊಸ ವೈಶಿಷ್ಟ್ಯದ ಮೊಬೈಲ್ ಅಪ್ಲಿಕೇಶನ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. 
ಈ ಹೊಸ ವೈಶಿಷ್ಟ್ಯದ ಮೊಬೈಲ್ ಅಪ್ಲಿಕೇಶನ್ ಮೂಲಕ ಸಣ್ಣ ಪ್ರಮಾಣದ ಚಹಾ ಬೆಳೆಗಾರರಿಗೆ ಪರಿಣಿತ ತಜ್ಞರಿಂದ ಉತ್ತಮ ಕೃಷಿ ಪದ್ಧತಿ ಸಲಹೆ ಒದಗಿಸಲಾಗುತ್ತದೆ ಎಂದು ಟೀ ಬೋರ್ಡ್ ಉಪಾಧ್ಯಕ್ಷ ಬಿದ್ಯಾನಂದ ಬರ್ಕಾಕೋಟಿ ತಿಳಿಸಿದ್ದಾರೆ.
 
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಹಯೋಗದಲ್ಲಿ ಟಾಟಾ ಗ್ಲೋಬಲ್ ಬೆವರೇಜಸ್ ಸಂಸ್ಥೆ, ಈ ಹೊಸ ವೈಶಿಷ್ಟ್ಯದ ಮೊಬೈಲ್ ಅಪ್ಲಿಕೇಶನ್‌ನ್ನು ಅಭಿವೃದ್ಧಿ ಪಡಿಸುತ್ತಿದೆ.
 
ಭಾರತ 2014 ರ ಸಾಲಿನಲ್ಲಿ 1,207.31 ಮಿಲಿಯನ್ ಕೆ.ಜಿ ಟೀ ಉತ್ಪಾದನೆ ಮಾಡಿದ್ದು, ಇದರಲ್ಲಿ ಅಸ್ಸಾಂ 610.97 ಮಿಲಿಯನ್ ಕೆ.ಜಿ ಪಾಲನ್ನು ಹೊಂದಿತ್ತು. 2015 ರ ಆರ್ಥಿಕ ವರ್ಷದಲ್ಲಿ 1,991 ಮಿಲಿಯನ್ ಕೆ.ಜಿ ಟೀ ಉತ್ಪಾದನೆ ಮಾಡಿದ್ದು, ಅಸ್ಸಾಂ 614.57 ಮಿಲಿಯನ್ ಕೆ.ಜಿ ಪಾಲು ಹೊಂದಿದೆ.
 
ಅಸ್ಸಾಂನ ಒಟ್ಟು ಟೀ ಉತ್ಪಾದನೆಯಲ್ಲಿ ಸಣ್ಣ ಪ್ರಮಾಣದ ಟೀ ಬೆಳೆಗಾರರು 30 ಪ್ರತಿಶತ ಪಾಲು ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ