ನಿಮ್ಮ ಕಣ್ಣುಗಳಿಂದ ಸ್ಮಾರ್ಟ್‌ಫೋನ್ ನಿಯಂತ್ರಿಸಬಹುದು ಗೊತ್ತಾ?

ಶನಿವಾರ, 2 ಜುಲೈ 2016 (20:24 IST)
ಭಾರತೀಯ ಮೂಲದ ಪದವಿ ವಿದ್ಯಾರ್ಥಿ ಸೇರಿದಂತೆ ಅಂತಾರಾಷ್ಟ್ರೀಯ ಸಂಶೋಧಕರ ತಂಡ, ಕಣ್ಣಿನ ಚಲನೆಗಳ ಮೂಲಕ ಸ್ಮಾರ್ಟ್‌ಪೋನ್ ನಿಯಂತ್ರಿಸುವ ಸಾಫ್ಟ್‌ವೇರ್‌ನ್ನು ಅಭಿವೃದ್ಧಿ ಪಡೆಸುತ್ತಿದ್ದಾರೆ. 
 
ಈ ಹೊಸ ವೈಶಿಷ್ಟ್ಯದ ಸಾಫ್ಟ್‌ವೇರ್ ಮೂಲಕ ಬಳಕೆದಾರರು ತಮ್ಮ ಕಣ್ಣಿನ ಚಲನೆಯ ಮೂಲಕ ಸ್ಮಾರ್ಟ್‌ಪೋನ್‌ನಲ್ಲಿ ಗೇಮ್ ಸೇರಿದಂತೆ, ಆಪ್ ಓಪನ್ ಮತ್ತು ಹಲವು ವಿಷಯಗಳನ್ನು ನಿಯಂತ್ರಿಸಬಹುದಾಗಿದೆ.
 
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಯುನ್ವರ್ಸಿಟಿ ಆಫ್ ಜಾರ್ಜಿಯಾ ಅಂಡ್ ಇನ್ಫರ್ಮ್ಯಾಟಿಕ್ಸ್ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಸಂಶೋಧಕರ ತಂಡ, ವ್ಯಕ್ತಿ ನೋಡವ ದೃಷ್ಟಿಯಿಂದ ಸ್ಮಾರ್ಟ್‌ಪೋನ್‌ಗಳಲ್ಲಿ 1 ಸೆಂಟಿಮೀಟರ್ ಮತ್ತು ಟ್ಯಾಬ್‌ನಲ್ಲಿ 1.7 ನಿಕರತೆಯನ್ನು ಗುರುತಿಸುವವರೆಗೂ ಅಭಿವೃದ್ಧಿ ಪಡಿಸಲಾಗಿದೆ. 

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ