ಪ್ರವಾಸಿಗರಿಗೆ ಸಂತಸ: ಶೀಘ್ರದಲ್ಲಿ ಗೋವಾ ಬೀಚ್‌ಗಳಲ್ಲಿ ವೈಫೈ ಸೌಲಭ್ಯ

ಶನಿವಾರ, 2 ಏಪ್ರಿಲ್ 2016 (14:09 IST)
ಪಣಜಿ: ಅತಿ ಚಿಕ್ಕ ರಾಜ್ಯ ಗೋವಾದ ಕಡಲತೀರಗಳಲ್ಲಿ ಶೀಘ್ರದಲ್ಲೇ ವೈಫೈ ಸೇವೆ ಆರಂಭಿಸುವುದಾಗಿ ಪ್ರವಾಸೋದ್ಯಮ ಸಚಿವ ದಿಲಿಪ್ ಪಾರುಲೇಕರ್ ತಿಳಿಸಿದ್ದಾರೆ.
ಕಡಲತೀರ ಹೊಂದಿರುವ ಗೋವಾ, ಪ್ರವಾಸಿಗರಿಗೆ ಅದ್ಭುತ ರಾತ್ರಿಗಳನ್ನು ಕಳೆಯಲು ಪ್ರಸಿದ್ಧವಾದ ಸ್ಥಳವಾಗಿದೆ. ಕೇಂದ್ರ ಸರಕಾರದ ಯೋಜನೆಯಡಿ ಕರಾವಳಿ ಹಾಟ್‌ಸ್ಪಾಟ್‌ಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ನೀಡಲು ನಿರ್ಧರಿಸಿದೆ ಎಂದು ಮಾಧ್ಯಮ ಸಭೆಯಲ್ಲಿ ತಿಳಿಸಿದ್ದಾರೆ.
 
ಗೋವಾ ರಾಜ್ಯದ ಎಲ್ಲ ಕಡಲತೀರಗಳು ವೈಫೈ ಸೇವೆಗೆ ಒಳಪಡುತ್ತಿದ್ದು, ಸ್ವದೇಶ ದರ್ಶನ ಯೋಜನೆ ಅಡಿಯಲ್ಲಿ ಕೇಂದ್ರದಿಂದ ಗೋವಾ ಸರಕಾರ 100 ಕೋಟಿ ಅನುದಾನ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
 
ಗೋವಾ ರಾಜ್ಯಕ್ಕೆ 5 ಲಕ್ಷ ವಿದೇಶಿ ಪ್ರವಾಸಿಗರು ಸೇರಿದಂತೆ 40 ಲಕ್ಷ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ.
 
ಈ ಯೋಜನೆ ಅಡಿಯಲ್ಲಿ ಎಲ್ಲ ಕಡಲತೀರಗಳಲ್ಲಿ ಸಿಸಿಟಿವಿ ಅಳವಡಿಸುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ