ಬಂಪರ್ ಆಫರ್ : 444 ರೂಪಾಯಿಗಳನ್ನು ಪಾವತಿಸಿ ವಿಮಾನದಲ್ಲಿ ಪ್ರಯಾಣಿಸಿ

ಬುಧವಾರ, 22 ಜೂನ್ 2016 (19:43 IST)
ಭಾರತದಲ್ಲಿ ನಿಧಾನ ಗತಿಯಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ವಿಮಾನಯಾನ ದರಗಳಲ್ಲಿ  ಮಳೆಗಾಲದ ರಿಯಾಯಿತಿ, ವಿನಾಯತಿಗಳ ಮಳೆ ಆರಂಭವಾಗಿದೆ. ವಿಮಾನಯಾನ ಸಂಸ್ಥೆಗಳು ಗ್ರಾಹಕರನ್ನು ಆಕರ್ಷಿಸಲು ಒನ್- ವೇ ದೇಶಿಯ ಪ್ರಯಾಣ ಟಿಕೆಟ್ ದರ 444 ರೂಪಾಯಿಗಳಿಗೆ ಸೀಮಿತಗೊಳಿಸಿವೆ. 
ಕಡಿಮೆ ದರದಲ್ಲಿ ವಿಮಾನ ಸೇವೆ ನೀಡುತ್ತಿರುವ ಸ್ಪೈಸ್ ಜೆಟ್ ಸಂಸ್ಥೆ ಓನ್ ವೇ ವಿಮಾನ ಪ್ರಯಾಣದ ದರವನ್ನು 444 ರೂಪಾಯಿಗಳಿಗೆ ನಿಗದಿ ಪಡಿಸಿದೆ.
 
ಮಾನ್ಸೂನ್ ಬೊನಾಂಜಾ ಸೇಲ್ ಅಡಿಯಲ್ಲಿ ವಿಮಾನ ಸೇವೆ ನೀಡುತ್ತಿರುವ ಸಂಸ್ಥೆಗಳು, ದೇಶಿಯ ಮಾರ್ಗದಲ್ಲಿ ಸಂಚರಿಸುವ ಗ್ರಾಹಕರಿಗೆ 444 ರೂಪಾಯಿಗಳಲ್ಲಿ ಸೇವೆ ನೀಡಲು ಮುಂದಾಗಿವೆ.
 
ಜಮ್ಮು-ಶ್ರೀನಗರ್, ಅಹ್ಮದಾಬಾದ್-ಮುಂಬೈ, ಮುಂಬೈ-ಗೋವಾ, ದೆಹಲಿ-ಡೆಹ್ರಾಡೂನ್ ಮತ್ತು ದೆಹಲಿ- ಅಮೃತಸರ ಮಾರ್ಗವಾಗಿ ಸಂಚಾರಿಸುವ ಪ್ರಯಾಣಿಕರು ಈ ಕಡಿಮೆ ದರದ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
 
ಗ್ರಾಹಕರು ಈ ಸೇವೆಯನ್ನು ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೂ ಪಡೆದುಕೊಳ್ಳಬಹುದಾಗಿದೆ. ವಿಮಾನದ ಮೂಲಕ ದೇಶಿಯ ಮಾರ್ಗದಲ್ಲಿ ತಡೆ ರಹಿತವಾಗಿ ಸಂಚರಿಸುವ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. 
 
ಜೆಟ್ ಏರ್‌ವೇಸ್ ಭಾರತದಲ್ಲಿ ಸಂಚರಿಸುವ ಪ್ರಯಾಣಿಕರಿಗೆ 20 ಪ್ರತಿಶತ ರಿಯಾಯಿತಿಯನ್ನು ಸಹ ನೀಡುತ್ತಿದೆ.
 
ಜುಲೈ 8, 2016 ರಂದು ಸಂಚರಿಸುವ ವಿಮಾನಗಳನ್ನು ಜೂನ್ 20, 2016 ರಿಂದ ಜೂನ್ 23, 2016ರಂದು ಬುಕ್ ಮಾಡುವ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ