ಕೇವಲ 999 ರೂ. ಗಳಿಗೆ ಸ್ಪೈಸ್ ಜೆಟ್, ಇಂಡಿಗೊ, ಜೆಟ್ ಏರ್‌ವೇಸ್ ಟಿಕೆಟ್ ಆಫರ್

ಮಂಗಳವಾರ, 28 ಜುಲೈ 2015 (20:03 IST)
ಕಡಿಮೆ ದರದ ಏರ್‌ಲೈನ್ಸ್ ಸಂಸ್ಥೆ ಸ್ಪೈಸ್ ಜೆಟ್ ಮಂಗಳವಾರ ಮುಂಗಾರು ಸೀಸನ್‌ಗೆ ಇನ್ನೊಂದು ಸುತ್ತಿನ ಟಿಕೆಟ್ ಡಿಸ್ಕೌಂಟ್ ಪ್ರಕಟಿಸಿದೆ.  ದೇಶೀಯ ಏರ್‌ಲೈನ್ಸ್‌ಗಳಾದ  ಜೆಟ್ ಏರ್‌ವೇಸ್ ಮತ್ತು ಇಂಡಿಗೊ ಎಕಾನಮಿ ಕ್ಲಾಸ್‌ಗೆ 999 ರೂ. ದರದಲ್ಲಿ ವಿಮಾನ ಪ್ರಯಾಣ ದರಗಳನ್ನು ಆಫರ್ ಮಾಡುತ್ತಿದೆ.  ಸ್ಪೈಸ್ ಜೆಟ್ ಸೀಮಿತ ಅವಧಿಯ ಮಾರಾಟದಲ್ಲಿ 999 ರೂ.ಗೆ ನೇರ ಪ್ರಯಾಣದ ಫ್ರೈಟ್ ಆಫರ್ ಮಾಡಿದೆ.
 
ಮೂರು ದಿನಗಳ ಮಾರಾಟಕ್ಕೆ ಇಂದು ಚಾಲನೆ ನೀಡಲಾಗಿದ್ದು ಜುಲೈ 30ರ ಮಧ್ಯರಾತ್ರಿವರೆಗೆ ತೆರೆದಿರುತ್ತದೆ.  ಆಗಸ್ಟ್ 4ರಿಂದ ಅಕ್ಟೋಬರ್ 15ರ ನಡುವಿನ ಪ್ರಯಾಣದ ಅವಧಿಗೆ ಈ ಟಿಕೆಟ್ ಬುಕ್ ಮಾಡಲಾಗುತ್ತದೆ.  ಈ ಆಫರ್‌ನಡಿ ನೀಡುವ ಟಿಕೆಟ್‌ಗಳನ್ನು ರೀಫಂಡ್ ಮಾಡಲಾಗುವುದಿಲ್ಲ.
 
999 ರೂ. ಟಿಕೆಟ್‌ಗೆ ಲಭ್ಯವಿರುವ ಒನ್ ವೇ  ಮಾರ್ಗಗಳು ಬೆಂಗಳೂರು-ಕೊಚ್ಚಿ, ಡೆಲ್ಲಿ-ಉದಯ್‌ಪುರ್, ಕೊಲ್ಕತಾ-ಅಗರ್ತಲಾ, ಪುಣೆ-ಗೋವಾ, ಅಮೃತಸರ-ಶ್ರೀನಗರ, ಹೈದರಾಬಾದ್-ಗೋವಾ, ಮುಂಬೈ-ಬೆಳಗಾಂ, ಕೋಲ್ಕತಾ-ಗುವಾಹಟಿ, ಚೆನ್ನೈ-ವಿಜಾಗ್ ಮುಂತಾದವುಗಳಿಗೆ ತೆರಿಗೆ ಕೂಡ ಸೇರಿವೆ.  

ವೆಬ್ದುನಿಯಾವನ್ನು ಓದಿ