ಸುಬ್ರತಾ ರಾಯ್ ಪೆರೋಲ್ ಅವಧಿ ಜೂನ್ 11ರವರೆಗೆ ವಿಸ್ತರಣೆ

ಬುಧವಾರ, 11 ಮೇ 2016 (19:02 IST)
ಹೂಡಿಕೆದಾರರಿಗೆ ವಂಚಿಸಿದ ಆರೋಪದ ಜೈಲು ಪಾಲಾಗಿದ್ದ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರ ಪೆರೋಲ್ ಅವಧಿಯನ್ನು ಸುಪ್ರೀಂ ಕೋರ್ಟ್ ಜುಲೈ 11ರವರೆಗೆ ವಿಸ್ತರಿಸಿದೆ.
ತಾಯಿ ನಿಧನದ ಹಿನ್ನಲೆಯಲ್ಲಿ ಈಗಾಗಲೇ ಒಂದು ತಿಂಗಳ ಅವಧಿಗೆ ಪೆರೋಲ್ ಪಡೆದಿರುವ ಸುಬ್ರತಾರಾಯ್ ಗೆ ಜುಲೈ 11ರೊಳಗೆ ಸೆಬಿಗೆ 200 ಕೋಟಿ ರು.ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಒಂದು ವೇಳೆ ಪಾವತಿಸದಿದ್ದರೆ ಪೆರೋಲ್  ಹಿಂಪಡೆಯಲಾಗುವುದು ಎಂದು ಎಚ್ಚರಿಸಿದೆ.
 
ಸಹರಾ ಸಂಸ್ಥೆ, 3 ಕೋಟಿ ಶೇರುದಾರರಿಗೆ ವಂಚನೆ ಮಾಡಿದ ಆರೋಪದ ಮೇಲೆ ಸುಬ್ರಾತ್ ರಾಯ್ ಅವರನ್ನು ಬಂಧಿಸಿ, 2014 ರ ಮಾರ್ಚ್ 4ರಂದು, ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ