ಸೂಪರ್‌ಫಾಸ್ಟ್ ಇಂಟರ್ನೆಟ್ ಶೀಘ್ರವೇ ವಾಸ್ತವರೂಪಕ್ಕೆ

ಸೋಮವಾರ, 29 ಜೂನ್ 2015 (19:52 IST)
ಅಂತರ್ಜಾಲವನ್ನು ಸೂಪರ್‌ಫಾಸ್ಟ್ ಮತ್ತು ಅಗ್ಗವಾಗಿಸುವ ಹೊಸ ಆವಿಷ್ಕಾರದಲ್ಲಿ ಸಂಶೋಧಕರು ಆಪ್ಟಿಕಲ್ ಸಂಕೇತಗಳನ್ನು ಆಪ್ಟಿಕಲ್ ಫೈಬರ್ ಮೂಲಕ ಕಳಿಸುವ ಗರಿಷ್ಠ ವಿದ್ಯುತ್ತನ್ನು ಮತ್ತು ದೂರವನ್ನು ಕೂಡ  ಯಶಸ್ವಿಯಾಗಿ ಹೆಚ್ಚಿಸಿದೆ. 
 
ಫೈಬರ್ ಆಪ್ಟಿಕ್ ಕೇಬಲ್‌ಗಳ ದತ್ತಾಂಶ ಪ್ರಸಾರ ದರಗಳನ್ನು ಹೆಚ್ಚಿಸುವ ಮೂಲಕ ಅಂತರ್ಜಾಲವನ್ನು ಸೂಪರ್ ಫಾಸ್ಟ್ ಮಾಡುವ ಸಾಮರ್ಥ್ಯವು ಈ ಸಂಶೋಧನೆಗಿದೆ. ಇವು ಅಂತರ್ಜಾಲ, ಕೇಬಲ್, ವೈರ್‌ಲೆಸ್ ಮತ್ತು ಲ್ಯಾಂಡ್‌ಲೈನ್ ಜಾಲಗಳ ಬೆನ್ನೆಲುಬಾಗಿ ಕೆಲಸ ಮಾಡುತ್ತದೆ
ಆಪ್ಟಿಕಲ್ ಫೈಬರ್‌ನಲ್ಲಿ ಗರಿಷ್ಟ ವಿದ್ಯುತ್ ಮಟ್ಟಕ್ಕಿಂತ ಹೆಚ್ಚಿನ ವಿದ್ಯುತ್ ಒತ್ತಡವು ಫೈಬರ್ ಆಪ್ಟಿಕ್ ಕೇಬಲ್‌ನಲ್ಲಿ ಪ್ರಸರಿಸುವ ಮಾಹಿತಿಯನ್ನು ಕೆಡಿಸುತ್ತದೆ.ಫೈಬರ್ ಆಪ್ಟಿಕ್‌ಗಳಲ್ಲಿ ಸಂಕೇತಕ್ಕೆ ಹೆಚ್ಚಿನ ವಿದ್ಯುತ್ ಹಾಯಿಸಿದರೆ ಒಂದು ಹಂತ ಮುಟ್ಟಿದ ಕೂಡಲೇ ಹೆಚ್ಚು ಅಡಚಣೆಗಳು ಉಂಟಾಗುತ್ತವೆ ಎಂದು ಲೇಖಕ ನಿಕೋಲಾ ಅಲಿಕ್ ಹೇಳಿದ್ದಾರೆ.

ನಮ್ಮ ವಿಧಾನದಲ್ಲಿ ವಿದ್ಯುತ್ ಮಿತಿಯನ್ನು ತೆಗೆದು ರಿಪೀಟರ್ ಇಲ್ಲದೆಯೇ ಆಪ್ಟಿಕಲ್ ಫೈಬರ್‌ನಲ್ಲಿ ಎಷ್ಟು ದೂರದವರೆಗೆ ಸಂಕೇತಗಳು ಪ್ರಯಾಣಿಸುತ್ತವೆ ಎನ್ನುವುದು ಸೇರಿದೆ ಎಂದು ಅಲಿಕ್ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ