ಶಂಕಿತ ಕಪ್ಪು ಹಣ 6100 ಕೋಟಿಗಿಂತ ಕಡಿಮೆ: ಬ್ಯಾಂಕ್ ಆಫ್ ಬರೋಡಾ

ಸೋಮವಾರ, 12 ಅಕ್ಟೋಬರ್ 2015 (17:49 IST)
ಕಪ್ಪು ಹಣ ವರ್ಗಾವಣೆ ಕುರಿತ ತನಿಖೆಗಳ ಮಧ್ಯೆ, ತಮ್ಮ ಬ್ಯಾಂಕ್ 6100 ಕೋಟಿ ಹಣವನ್ನು ವರ್ಗಾವಣೆ ಮಾಡಿದೆ ಎಂಬ  ಆರೋಪವು ಉತ್ಪ್ರೇಕ್ಷಿತವಾಗಿದ್ದು, ವಾಸ್ತವ ಮೊತ್ತವು ಅದಕ್ಕಿಂತ ಕಡಿಮೆಯಾಗಿದೆ ಎಂದು ಹೇಳಿದೆ. ಶೇ. 90ರಷ್ಟು ಫಂಡ್ ಬೇರೆ 30 ಬ್ಯಾಂಕ್‌ಗಳಿಂದ ಬಂದಿದ್ದು, ಶೇ. 10ರಷ್ಟು ಮಾತ್ರ ನವದೆಹಲಿಯ ತಮ್ಮ ಶಾಖೆಯಲ್ಲಿ ನಗದಾಗಿ ಸ್ವೀಕರಿಸಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡ ತಿಳಿಸಿದೆ.
 
ಕಳೆದ ವಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿ 6172 ಕೋಟಿ ರೂ. ಕಪ್ಪು ಹಣವನ್ನು ಬ್ಯಾಂಕ್ ಆಫ್ ಬರೋಡಾದಿಂದ ಹಾಂಕಾಂಗ್‌ಗೆ ವರ್ಗಾವಣೆ ಮಾಡಲಾಗಿದ್ದು,ಅಸ್ತಿತ್ವದಲ್ಲಿಲ್ಲದ ಗೇರುಬೀಜ, ಬೇಳೆಕಾಳು ಮತ್ತು ಅಕ್ಕಿಯ ಆಮದಿಗೆ ಪೇಮೆಂಟ್‌ಗಳು ಎಂದು ಹೇಳುವ ಮೂಲಕ ಮರೆಮಾಚಲಾಗಿತ್ತು. ವಾಸ್ತವವಾಗಿ ಕಪ್ಪು ಹಣವನ್ನು ಹಾಂಕಾಂಗ್‌ಗೆ ವರ್ಗಾಯಿಸಲಾಗಿತ್ತು. 
 
ಬ್ಯಾಂಕ್‌ನ ಅಶೋಕ್ ವಿಹಾರ್ ಶಾಖೆಯಲ್ಲಿ ಆಮದಿಗಾಗಿ ಮುಂಗಡ ಹಣ ನೀಡುವುದಕ್ಕಾಗಿ ನಗದಿನ ರೂಪದಲ್ಲಿ 59 ಶಾಖೆಗಳಲ್ಲಿ ಈ ಹಣವನ್ನು ಡಿಪೋಸಿಟ್ ಮಾಡಲಾಗಿದ್ದು, ಹಾಂಕಾಂಗ್‌ನ ಆಯ್ದ ಕಂಪನಿಗಳಿಗೆ ಕಳಿಸಲಾಗಿದೆ.  ಈ ಅಕ್ರಮ ವಹಿವಾಟನ್ನು ಬ್ಯಾಂಕ್ ಗುರುತಿಸಿ ಸಿಬಿಐ ಮತ್ತು ಇಡಿಗೆ ವರದಿ ಮಾಡಿದೆಯಲ್ಲದೇ ಆಡಿಟರ್ ಸೇವೆಯನ್ನು ಕೂಡ ವಜಾ ಮಾಡಿದೆ ಎಂದು ಬ್ಯಾಂಕ್ ಎಕ್ಸಿಕ್ಯೂಟಿವ್ ನಿರ್ದೇಶಕ ಜೋಷಿ ಹೇಳಿದರು. 
 

ವೆಬ್ದುನಿಯಾವನ್ನು ಓದಿ