ಸುಜುಕಿಯಿಂದ ಐಷಾರಾಮಿ ಗಿಕ್ಸರ್, ಗಿಕ್ಸರ್ ಎಸ್‌ಎಫ್‌ ಬೈಕ್‌ಗಳು ಮಾರುಕಟ್ಟೆಗೆ

ಮಂಗಳವಾರ, 30 ಆಗಸ್ಟ್ 2016 (18:53 IST)
ಇತ್ತಿಚೆಗೆ ಸೋರಿಕೆಯಾದ ಪೋಸ್ಟರ್‌ಗಳ ಪ್ರಕಾರ, ಶೀಘ್ರದಲ್ಲಿಯೇ ಸುಜುಕಿ ಮೋಟರ್ಸ್ ಸೀಮಿತ ರೂಪಾಂತರಗಳ ಗಿಕ್ಸರ್ ಹಾಗೂ ಗಿಕ್ಸರ್ ಎಸ್‌ಎಫ್ ಆವೃತ್ತಿಯ ಮೋಟರ್‌ಸೈಕಲ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.  
 
ಸದ್ಯ, ಈ ಅದ್ಭುತ ಮೋಟರ್‌ಸೈಕಲ್‌ಗಳ ದರ ಹಾಗೂ ಬಿಡುಗಡೆ ಕುರಿತು ಯಾವುದೇ ಮಾಹಿತಿಯನ್ನು ಸಂಸ್ಥೆ ಬಹಿರಂಗ ಪಡಿಸಿಲ್ಲ. ಆದರೆ, ವಾಸ್ತವವಾಗಿ ಹಬ್ಬದ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಬ್ಬದ ಸೀಜನ್ ಸಂದರ್ಭದಲ್ಲಿಯೇ ಈ ಮೋಟರ್‌ಸೈಕಲ್‌ಗಳು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ ಎಂದು ಹೇಳಲಾಗುತ್ತಿದೆ.
 
ಸೋರಿಕೆಯಾಗಿರುವ ಚಿತ್ರಗಳ ಪ್ರಕಾರ, ಗಿಕ್ಸರ್ ಎಸ್‌ಎಫ್ ಆವೃತ್ತಿಯ ಮೋಟರ್‌ಸೈಕಲ್‌ಗಳ ಮುಂಭಾಗದಲ್ಲಿ ಗ್ರಾಫಿಕ್ಸ್‌ನಲ್ಲಿ ರಂಗುರಂಗಿನ ಧ್ವಜ ಮೂಡಿ ಬಂದಿದೆ. ಹಾಗೂ ಈ ಆವೃತ್ತಿಯ ಮೋಟರ್‌ಸೈಕಲ್‌ಗಳು ಗ್ರೇ ಬಣ್ಣದಲ್ಲಿ ಕಾಣಿಸಿಕೊಂಡಿದೆ. 
 
ಈ ಎರಡು ಬೈಕ್‌ಗಳ ಮೇಲೆ 'ಎಸ್‌ಪಿ' ಹೆಸರಿನ ಲಾಂಛನವಿದ್ದು, ಸ್ಫೋರ್ಟಿ ಡ್ಯುಯಲ್ ಟೋನ್ ರೆಡ್ ಹಾಗೂ ಬ್ಲ್ಯಾಕ್‌ ಬಣ್ಣದ ಸೀಟ್‌ ಹಾಗೂ ಒಳಗೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ