ಸ್ವೈಪ್‌ಕಾರ್ಡ್‌ಗೆ ಬೈ ಬೈ, ಚಿಪ್ ಟ್ಯಾಗ್‌ಗೆ ಸ್ವಾಗತ

ಶನಿವಾರ, 31 ಜನವರಿ 2015 (12:30 IST)
ಸ್ವೈಪ್ ಕಾರ್ಡ್ ಮತ್ತು ಥಂಬ್ ಸ್ಕಾನರ್‌ನಿಂದ ಮುಕ್ತಿ ಪಡೆಯಲು ಸ್ವೀಡನ್ ಕಚೇರಿ ಸಂಕೀರ್ಣದಲ್ಲಿನ ನೌಕರರಿಗೆ ಸ್ವತಃ ಆರ್‌ಎಫ್‌ಐಡಿ ಟ್ಯಾಗ್ ಧರಿಸುವ ಆಯ್ಕೆ ನೀಡಲಾಗಿದೆ. ಅಕ್ಕಿಕಾಳಿನ ಗಾತ್ರದ ಅತೀ ಸಣ್ಣ ಚಿಪ್‌ವೊಂದನ್ನು ಅವರ ಕೈಗಳಿಗೆ ಕಸಿ ಮಾಡಲಾಗುತ್ತದೆ.

ಈ ಚಿಪ್‌ನಲ್ಲಿ ಸಂಕೇತಾಕ್ಷರದ ಮಾಹಿತಿಯಿದ್ದು, ತಮ್ಮ ಕೈ ಸ್ವೈಪ್ ಮಾಡುವ ಮೂಲಕ ಬಾಗಿಲನ್ನು ತೆಗೆಯಲು ಮತ್ತು ಕಚೇರಿ ಪ್ರಿಂಟರ್‌ಗಳನ್ನು ಬಳಸಲು ನೆರವಾಗುತ್ತದೆ. ಇದೊಂದು ಪೈಲಟ್ ಯೋಜನೆಯಾಗಿದ್ದು, ಚಿಪ್ ಅಭಿವೃದ್ಧಿಗಾರರಿಗೆ ಅದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗುತ್ತದೆ.

ಉದಾಹರಣೆಗೆ ಕಂಪ್ಯೂಟರ್‌ಗಳಿಗೆ ಲಾಗಿನ್ ಮಾಡಲು ಮತ್ತು ಕಚೇರಿ ಕೆಫೆಟೇರಿಯಾದಲ್ಲಿ ಲಂಚ್‌ಗೆ ಹಣ ನೀಡಬಹುದು. ತಂತ್ರಜ್ಞಾನ ಸಮಾವೇಶಗಳನ್ನು ಆಯೋಜಿಸುವ ಕಂಪನಿ ಸೈಮ್‌ನ ಸ್ಟಾಕ್‌ಹ್ಯಾಮ್ ಕಚೇರಿ ಇಂತಹ ಕಾರ್ಯಕ್ರಮದಲ್ಲಿ ನೌಕರರನ್ನು ಸಕ್ರಿಯವಾಗಿ ಒಳಗೊಳ್ಳುವಂತೆ ಮಾಡುವ ಪ್ರಥಮ ಕಂಪನಿಯಾಗಿದೆ.

ವೆಬ್ದುನಿಯಾವನ್ನು ಓದಿ