ಸ್ವೈಪ್‌ ಕಂಪನಿಯ ಎಲೈಟ್ ಮ್ಯಾಕ್ಸ್ ಸ್ಮಾರ್ಟ್‌ಫೋನ್

ಶನಿವಾರ, 17 ಡಿಸೆಂಬರ್ 2016 (10:46 IST)
ಮೊಬೈಲ್ ತಯಾರಿಕಾ ಕಂಪನಿ ಸ್ವೈಪ್ ’ಎಲೈಟ್ ಮ್ಯಾಕ್ಸ್’ ಹೆಸರಿನ ಹೊಸ ಫೋನನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು 4ಜಿ ಸೆಟ್ ಆಗಿದ್ದು ಇಂದಿನ ಬಹುತೇಕ ಅಗತ್ಯಗಳಿಗೆ ತಕ್ಕಂತೆ ತಯಾರಿಸಲಾಗಿದೆ. ಬೆಲೆ ರು.10,999. ಪ್ರಸಿದ್ಧ ಆಲ್‍ಲೈನ್ ಮಾರಾಟ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಲಭ್ಯವಾಗಲಿದೆ.
 
ಎಲೈಟ್ ಮ್ಯಾಕ್ಸ್ ಫೋನ್ ವಿಶೇಷಗಳು
* 5.5 ಇಂಚು ಸ್ಪರ್ಶಸಂವೇದಿ ಪರದೆ
* ಆಂಡ್ರಾಯ್ಡ್ 6.0 ಓಎಸ್
* 4 ಜಿಬಿ ರ್ಯಾಮ್
* 32 ಜಿಬಿ ಮೆಮೊರಿ
* 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
* ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯ
* 3000 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ