ನಿಮ್ಮ ಮೊಬೈಲ್ ಸಂಖ್ಯೆ ನೀವೇ ಆಯ್ಕೆ ಮಾಡಿಕೊಳ್ಳಿ: ಟಾಟಾ ಡೊಕೋಮೊ

ಸೋಮವಾರ, 22 ಡಿಸೆಂಬರ್ 2014 (17:20 IST)
ಟಾಟಾ ಡೊಕೋಮೊ ಸೋಮವಾರ ಗ್ರಾಹಕರಿಗೆ ಅವರದ್ದೇ 10 ಅಂಕಿಗಳ ಮೊಬೈಲ್ ನಂಬರ್ ಸೃಷ್ಟಿಸಲು ಅವಕಾಶ ನೀಡುವ ಸೇವೆಯನ್ನು ಬಿಡುಗಡೆ ಮಾಡಿದೆ. ಟಾಟಾ ಟೆಲಿಸರ್ವೀಸಸ್ ಬ್ರಾಂಡ್ ಟಾಟಾ ಡೊಕೋಮೋ 10 ಟೆಲಿಕಾಂ ವೃತ್ತಗಳಲ್ಲಿ ಕಾರ್ಯಾಚರಣೆಯಲ್ಲಿದೆ.

ಇಟೀಸ್ ಮೈ ಲೈಫ್, ಇಟೀಸ್ ಮೈ ನಂಬರ್ ಎಂಬ ಅಭಿಯಾನದೊಂದಿಗೆ ಆರಂಭವಾದ ಟಾಟಾ ಡೊಕೋಮೋ ಗ್ರಾಹಕರಿಗೆ ಅವರ ಇಷ್ಟವಾದ ಸಂಖ್ಯೆ ಆರಿಸಿಕೊಳ್ಳುವುದನ್ನು ಸುಲಭಗೊಳಿಸಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ತಮ್ಮದ್ದೇ ನಂಬರ್ ಸೃಷ್ಟಿಸಲು ಬಯಸುವವರು ಟಾಟಾ ಡೊಕೋಮಾ ಬ್ರಾಂಡ್ ಸ್ಟೋರ್‌ಗಳಿಗೆ ಭೇಟಿ ನೀಡಿ ಅವರ ಆದ್ಯತೆಗಳನ್ನು ಒದಗಿಸಬೇಕು. ಉದಾಹರಮೆಗೆ ಪ್ರಸಕ್ತ ಸಂಖ್ಯೆಗಳು, ಹುಟ್ಟಿದ ದಿನಾಂಕಗಳು, ನೆಚ್ಚಿನ ಸಂಖ್ಯೆಗಳು ಅಥವಾ ನೆನಪಿಸಲು ಸುಲಭವಾಗಿದ್ದನ್ನು ನೀಡಬಹುದು.

ವೆಬ್ದುನಿಯಾವನ್ನು ಓದಿ