ಟಾಟಾ ಮೋಟಾರ್ಸ್ ಮಾರಾಟದಲ್ಲಿ 3% ಹೆಚ್ಚಳ

ಮಂಗಳವಾರ, 3 ಮೇ 2016 (15:31 IST)
ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟಾರ್, ಕಳೆದ ಆರ್ಥಿಕ ವರ್ಷದ ಏಪ್ರಿಲ್ ತಿಂಗಳಲ್ಲಿ  36,190 ವಾಹನಗಳನ್ನು ಮಾರಾಟ ಮಾಡಿದ್ದು, ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ ತಿಂಗಳ ಮಾರಾಟದಲ್ಲಿ 9.9 ಪ್ರತಿಶತ ಹೆಚ್ಚಳ ಕಂಡು 39,763 ವಾಹನಗಳನ್ನು ಮಾರಾಟದ ಗಡಿದಾಟಿದೆ.
ಟಾಟಾ ಮೋಟಾರ್ ವಾಹನಗಳ ಮಾರಾಟದಲ್ಲಿ ಹೆಚ್ಚಳವಾದ ಪರಿಣಾಮ ಸಂಸ್ಥೆಯ ಶೇರುಗಳ ಬೆಲೆ 3.57 ಪ್ರತಿಶತ ಏರಿಕೆ ಕಂಡಿದೆ.
 
ಟಾಟಾ ಮೋಟರ್ಸ್ ಸಂಸ್ಥೆಯ ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳ ದೇಶಿಯ ಮಾರಾಟದಲ್ಲಿ 11 ಪ್ರತಿಶತ ಹೆಚ್ಚಳವಾಗಿ 35,978 ವಾಹನಗಳು ಮಾರಾಟ ಹೊಂದಿದೆ. 2015 ರ ಆರ್ಥಿಕ ವರ್ಷದ ಇದೆ ಅವಧಿಯಲ್ಲಿ 32,404 ವಾಹನಗಳು ಮಾರಾಟ ಹೊಂದಿದ್ದವು.
 
ಕಳೆದ ಆರ್ಥಿಕ ವರ್ಷದ ಇದೆ ಅವಧಿಗೆ ಹೊಲಿಸದರೆ, ಪ್ರಯಾಣಿಕ ಕಾರುಗಳ ಮಾರಾಟದಲ್ಲಿ 5.9 ಪ್ರತಿಶತ ಹೆಚ್ಚಳವಾಗಿ 9,451 ಕಾರುಗಳನ್ನು ಮಾರಾಟ ಮಾಡಿದೆ.
 
2015-16 ರ ಆರ್ಥಿಕ ವರ್ಷಕ್ಕೆ ಹೊಲಿಸದರೆ, ಭಾರತದ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳ ಮಾರಾಟ 13.3 ಪ್ರತಿಶತ ಹೆಚ್ಚಳವಾಗಿ 25,138 ವಾಹನಗಳನ್ನು ಮಾರಾಟ ಮಾಡಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ