ವಾರ್ಷಿಕ 5 ಲಕ್ಷ ಕೋಟಿ ವ್ಯವಹಾರ ನಡೆಸಿದ ಟಾಟಾ ಕನ್ಸಲ್‌ಟನ್ಸಿ ಮೊದಲ ಭಾರತೀಯ ಕಂಪೆನಿ

ಗುರುವಾರ, 24 ಜುಲೈ 2014 (16:16 IST)
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಟಾಟಾ ಕನ್ಸಲ್‌ಟಿಂಗ್ ಸರ್ವಿಸಸ್ (ಟಿಸಿಎಸ್) ವಾರ್ಷಿಕವಾಗಿ 5 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ಕುದರಿಸಿಜ ವಿಶ್ವದ ಎರಡನೇ ಪ್ರತಿಷ್ಠಿತ ಕಂಪೆನಿಯಾಗಿ ಹೊರಹೊಮ್ಮಿದೆ. ಐಬಿಎಂ ಕಂಪೆನಿ ಅಗ್ರಸ್ಥಾನದಲ್ಲಿದೆ.
 
ಟಿಸಿಎಸ್ ಕಂಪೆನಿ ಆರಂಭವಾಗಿ 10 ವರ್ಷಗಳ ಅವಧಿಯಲ್ಲಿಯೇ ಗರಿಷ್ಠ 5,03.148 ಕೋಟಿ(84 ಬಿಲಿಯನ್ ಡಾಲರ್) ವಹಿವಾಟು ನಡೆಸಿದೆ. ಅಸೆಂಚರ್ 51 ಬಿಲಿಯನ್ ಡಾಲರ್ ಮತ್ತು ಐಬಿಎಂ 193.7 ಬಿಲಿಯನ್ ಡಾಲರ್ ವಹಿವಾಟು ನಡೆಸಿದೆ. 
 
5 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ ಮೊದಲ ಭಾರತೀಯ ಕಂಪೆನಿ ಎನ್ನುವ ಹೆಗ್ಗಳಿಕೆಗೆ ಟಿಸಿಎಸ್ ಪಾತ್ರವಾಗಿದೆ. ದೇಶದ ಇತರ ಐಟಿ ಕಂಪೆನಿಗಳಾದ ಇನ್ಫೋಸಿಸ್ 31.7 ಬಿಲಿಯನ್  ಡಾಲರ್, ವಿಪ್ರೋ 23.3 ಬಿಲಿಯನ್ ಡಾಲರ್, ಎಚ್‌ಸಿಎಲ್ ಟೆಕ್ನಾಲಾಜೀಸ್ 17.9 ಬಿಲಿಯನ್ ಡಾಲರ್ ಮತ್ತು ಟೆಕ್ ಮಹೇಂದ್ರಾ 18.5 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ನಡೆಸಿವೆ.
 
 
 

ವೆಬ್ದುನಿಯಾವನ್ನು ಓದಿ