ನೌಕರರ ವಲಸೆ ತಗ್ಗಿಸಲು ಟಿಸಿಎಸ್ 2628 ಕೋಟಿ ಬೋನಸ್

ಶುಕ್ರವಾರ, 17 ಏಪ್ರಿಲ್ 2015 (18:38 IST)
ಲಕ್ಷಾಂತರ ನೌಕರರಿಗೆ ತಮ್ಮ ಕಂಪನಿ ನೀಡುತ್ತಿರುವ ಒಟ್ಟು 2628 ಕೋಟಿ ರೂ. ವೆಚ್ಚದ ಬೋನಸ್‌ನಿಂದ ಅಧಿಕ ಪ್ರಮಾಣದಲ್ಲಿ  ನೌಕರರು ಕಂಪನಿ ತೊರೆಯುವುದು ತಗ್ಗುತ್ತದೆ ಎಂದು  ದೇಶದ ಅತೀ ದೊಡ್ಡ ಸಾಫ್ಟ್‌ವೇರ್ ರಫ್ತು ಕಂಪನಿ ಟಿಸಿಎಸ್ ಆಶಿಸಿದೆ. 
 
ಇತ್ತೀಚೆಗೆ ವಿಲೀನಗೊಂಡ ಸಿಎಂಸಿಯ 11,000 ನೌಕರರಿಗೆ ಈ ಬೋನಸ್ ಸಿಗುವುದಿಲ್ಲ ಎಂದು ಐಟಿ ಕಂಪನಿ ಸ್ಪಷ್ಟಪಡಿಸಿದೆ. ಇದು ಮುಖ್ಯವಾಗಿ ಟಿಸಿಎಸ್ ಸಿಬ್ಬಂದಿಗೆ ನೀಡುವ ಬೋನಸ್. ಸಹಾಯಕ ಸಂಸ್ಥೆಗಳಿಗೆ ಬೋನಸ್ ಲಭ್ಯವಿಲ್ಲ ಎಂದು ಟಿಸಿಎಸ್ ಗ್ಲೋಬರ್ ಎಚ್‌ಆರ್ ಮುಖ್ಯಸ್ಥ ಅಜಯ್ ಮುಖರ್ಜಿ ತಿಳಿಸಿದ್ದಾರೆ. 
 
ನೌಕರರು ನಿರ್ಗಮನ ಹೆಚ್ಚುವುದಕ್ಕೂ ಬೋನಸ್ ಪ್ರಕಟಿಸುವುದಕ್ಕೂ ಸಂಬಂಧವಿಲ್ಲ ಎಂದು ಅವರು ನಿರಾಕರಿಸಿದರು. ಬೋನಸ್‌ನಿಂದ ನೌಕರರ ನಿರ್ಗಮನ ತಪ್ಪಿಸಲು ಅನುಕೂಲವಿದ್ದರೂ, ಮುಖ್ಯ ಗುರಿ ಮೌಲ್ಯ ಸೃಷ್ಟಿಸುವುದಾಗಿದೆ ಎಂದು ಹೇಳಿದರು. 
 
 

ವೆಬ್ದುನಿಯಾವನ್ನು ಓದಿ