ಟಿಸಿಎಸ್‌ನಲ್ಲಿ ಉದ್ಯೋಗ ಜಗತ್ತಿನಲ್ಲೇ ಅತ್ಯುತ್ತಮ

ಗುರುವಾರ, 9 ಮಾರ್ಚ್ 2017 (11:34 IST)
ದೇಶೀಯ ಮಾಹಿತಿ ತಂತ್ರಜ್ಞಾನ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಕುಟಕ್ಕೆ ಮತ್ತೊಂದು ಗರಿ ಮೂಡಿದೆ. ಜಗತ್ತಿನಲ್ಲೆ ಅತ್ಯುತ್ತಮ ಮಾಲೀಕತ್ವದ ಕಂಪೆನಿಗಳ ಪಟ್ಟಿಯಲ್ಲಿ ಒಂದಾಗಿ ಸ್ಥಾನಪಡೆದಿದೆ. ನಿರಂತವಾಗಿ ಎರಡನೇ ಬಾರಿ ಈ ಘನತೆಯನ್ನು ಟಿಸಿಎಸ್ ಪಡೆದುಕೊಂಡಿದೆ.
 
ಯೂರೋಪ್, ಏಷ್ಯಾ ಫೆಸಿಫಿಕ್, ಉತ್ತರ ಅಮೆರಿಕ, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯದಲ್ಲಿ ಕಂಪೆನಿ ಉದ್ಯೋಗಿಗಳಿಗೆ ನೀಡುತ್ತಿರುವ ಉತ್ತಮ ಸೇವೆಗಳಿಗಾಗಿ ಈ ಮನ್ನಣೆ ದೊರಕಿದೆ. ಅಂತಾರಾಷ್ಟ್ರೀಯ ಸಂಸ್ಥೆ ಟಾಪ್ ಎಂಪ್ಲಾಯರ್ ಇನ್‌ಸ್ಟಿಟ್ಯೂಟ್ ವಿವರಗಳನ್ನು ಪ್ರಕಟಿಸಿದೆ.
 
ಉದ್ಯೋಗಿಗಳಿಗೆ ಅನುಕೂಲಕರವಾದ ವಾತಾವರಣ ಕಲ್ಪಿಸುವುದು, ವೃತ್ತಿ, ವೈಯಕ್ತಿಕ ಜೀವನದಲ್ಲಿನ ಉನ್ನತ ಶಿಖರಗಳನ್ನು ಸೇರಲು ಟಿಸಿಎಸ್ ಪ್ರೋತ್ಸಾಹಿಸುತ್ತಿದೆ ಎಂದು ಟಾಪ್ ಎಂಪ್ಲಾಯಿಸ್ ಮೆಚ್ಚುಗೆ ವ್ಯಕ್ತಪಡಿಸಿದೆ. 
 
ತಮ್ಮ ಉದ್ಯೋಗಿಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದರ ಜತೆಗೆ, ಪ್ರಸ್ತುತ ಡಿಜಿಟಲ್ ತಾಂತ್ರಿಕತೆಗೆ ಅನುಗುಣವಾಗಿ ಅವರ ನೈಪುಣ್ಯತೆಯನ್ನು ಉತ್ತಮಪಡಿಸಲು ಬಂಡವಾಳ ಹೂಡುತ್ತಿದೆ ಎಂದು ಟಿಸಿಎಸ್ ಎಗ್ಜಿಕ್ಯೂಟೀಟ್ ಉಪಾಧ್ಯಕ್ಷ, ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಜಯ್ ಮುಖರ್ಜಿ ತಿಳಿಸಿದ್ದಾರೆ. ಜಗತ್ತಿನಾದ್ಯಂತ 116 ದೇಶಗಳಲ್ಲಿ 1,600 ಕಂಪೆನಿಗಳ ಸಮೀಕ್ಷೆ ನಡೆಸಿ ಈ ಪಟ್ಟಿಯನ್ನು ಟಾಪ್ ಎಂಪ್ಲಾಯಿಸ್ ತಯಾರಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ