ಒಂದು ರೂಪಾಯಿ ನೋಟಿನ ಮುದ್ರಣ ವೆಚ್ಚ ರೂ. 1.14

ಗುರುವಾರ, 2 ಜುಲೈ 2015 (18:33 IST)
ನವದೆಹಲಿ: ಸುಮಾರು 20 ವರ್ಷಗಳ ಅಂತರದ ನಂತರ ಇತ್ತೀಚೆಗೆ ಜಾರಿಗೆ ತರಲಾದ  ಒಂದು ರೂಪಾಯಿ ನೋಟಿನ ಮುದ್ರಣ ವೆಚ್ಚವು ಒಂದು ರೂಪಾಯಿ ಮೌಲ್ಯಕ್ಕಿಂತ ಹೆಚ್ಚಾಗಿದೆ. ಅದರ ಮುದ್ರಣ ವೆಚ್ಚವು 1.14ರೂ. ಎಂದು ಆರ್‌ಟಿಐ ಪ್ರಶ್ನೆಗೆ ಉತ್ತರಿಸಲಾಗಿದೆ. 
 
ಭದ್ರತಾ ಮುದ್ರಣ ಮತ್ತು ಠಂಕಸಾಲೆ ನಿಗಮ ಆರ್‌‍ಟಿಐ ಪ್ರತಿಕ್ರಿಯೆಗೆ ಉತ್ತರಿಸುತ್ತಾ, ಈ ರೂಪಾಯಿಯ ಮುದ್ರಣಾ ವೆಚ್ಚವು ಲೆಕ್ಕತಪಾಸಣೆಯಲ್ಲಿದೆ ಎಂದು ತಿಳಿಸಿದೆ. 
ಅಧಿಕ ಮುದ್ರಣ ವೆಚ್ಚದ ಹಿನ್ನೆಲೆಯಲ್ಲಿ 1994ರಲ್ಲಿ ಒಂದು ರೂಪಾಯಿ ಮುದ್ರಣವನ್ನು ನಿಲ್ಲಿಸಲಾಗಿತ್ತು. ಇದೇ ರೀತಿ 2 ರೂ. ಮ್ತತು ಐದು ರೂ. ಮುಖಬೆಲೆಯ ನೋಟುಗಳನ್ನು ಇದೇ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಆರ್‌ಟಿಐ ಕಾರ್ಯಕರ್ತ ಸುಭಾಷ್ ಚಂದ್ರ ಅಗರವಾಲ್ ತಿಳಿಸಿದ್ದಾರೆ. 
 
ಇತರೆ ಕರೆನ್ಸಿ ನೋಟುಗಳಲ್ಲಿ ಆರ್‌ಬಿಐ ಗವರ್ನರ್ ಸಹಿ ಇದ್ದರೆ, ಒಂದು ರೂಪಾಯಿ ನೋಟಿನಲ್ಲಿ ಹಣಕಾಸು ಕಾರ್ಯದರ್ಶಿ ಸಹಿಯಿದೆ. ಸರ್ಕಾರ ಪುನಃ ಹಳೆಯ ಪದ್ಧತಿಗೆ ಮರಳಿ ಒಂದು ರೂ. ನೋಟು ಮುದ್ರಿಸುತ್ತಿರುವ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು. 
 
ಕೇಂದ್ರ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಯ ಸಹಿ ಈ ನೋಟುಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಸಲುವಾಗಿ ಪುನಃ  ದುಬಾರಿ ವೆಚ್ಚದ ಒಂದು ರೂ. ನೋಟನ್ನು ಮುದ್ರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದರು. 

ವೆಬ್ದುನಿಯಾವನ್ನು ಓದಿ