ಮೊಬೈಲ್ ಟವರ್‌ನಿಂದ ದುಷ್ಪರಿಣಾಮ: ಆದ್ರೂ ನಿಯಮಗಳಲ್ಲಿ ಬದಲಾವಣೆಯಿಲ್ಲ

ಮಂಗಳವಾರ, 16 ಡಿಸೆಂಬರ್ 2014 (16:19 IST)
ಮೊಬೈಲ್ ಟವರ್‌ಗಳ ದುಷ್ಪರಿಣಾಮಗಳಿಂದ ಆತಂಕ ಹೆಚ್ಚುತ್ತಿರುವ ನಡುವೆ ಸೆಲ್ಯೂಲಾರ್ ಟವರ್ ಮತ್ತು ಮೊಬೈಲ್ ಫೋನ್‌ಗಳಿಗೆ ವಿಕಿರಣ ಹೊಮ್ಮುವಿಕೆಯ ನಿಯಮಗಳನ್ನು ಬಿಗಿಗೊಳಿಸುವುದಕ್ಕೆ ಸರ್ಕಾರ ಒಪ್ಪಿಲ್ಲ.ಭಾರತದ ಮಾನದಂಡಗಳು ಸಾಕಷ್ಟಿದ್ದು, ಈ ನಿಯಮಗಳಿಗೆ ತಕ್ಷಣದ ಬದಲಾವಣೆಗೆ ಅಧಿಕೃತ ಸಮಿತಿ ನಿರಾಕರಿಸಿದೆ ಎಂದು ಟೆಲಿಕಾಂ ಇಲಾಖೆಯ ಉನ್ನತ ಮೂಲ ತಿಳಿಸಿದೆ.

 
ಪ್ರಸ್ತುತ ನಿಗದಿತ ವಿದ್ಯುತ್ ಆಯಸ್ಕಾಂತೀಯ ಕ್ಷೇತ್ರದ ಸುರಕ್ಷತೆ ಮಿತಿಗಳು ಸಾಕಷ್ಟಿದ್ದು, ಈ ಹಂತದಲ್ಲಿ ಮತ್ತಷ್ಟು ಬದಲಾವಣೆ ಅಗತ್ಯವಿಲ್ಲ. ಇದನ್ನು ದೂರಸಂಪರ್ಕ ಇಲಾಖೆ ಕೂಡ ಒಪ್ಪಿದೆ ಎಂದು ಕೊಚ್ಚಿಯಲ್ಲಿ ಅಂತಾರಾಷ್ಟ್ರೀಯ ದೂರಸಂಪರ್ಕ ಸಂಘದ ಸಮಾವೇಶದ ನೇಪಥ್ಯದಲ್ಲಿ ಮೂಲವೊಂದು ತಿಳಿಸಿದೆ.ಭಾರತದ ಮಾನದಂಡಗಳು ಇತರೆ ದೇಶಗಳ ನಿಯಮಗಳಿಗಿಂತ ಕಠಿಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಎಸ್.ಎಸ್. ಸಿರೋಹಿ, ಹಿರಿಯ ಡಿಡಿಜಿ ಮತ್ತು ಟೆಲಿಕಾಂ ಎನ್‌‌ಫೋರ್ಸ್‌ಮೆಂಟ್ ,ಡಿಒಟಿಯ ಸಂಪನ್ಮೂಲ ಮತ್ತು ಉಸ್ತುವಾರಿ ವಿಭಾಗದ ಮುಖ್ಯಸ್ಥರು ಈ ಸಮಿತಿಯಲ್ಲಿ  ಸೇರಿದ್ದಾರೆ.ಅಲಹಾಬಾದ್ ಹೈಕೋರ್ಟ್ ಸೂಚನೆಗಳ ಮೇಲೆ ಈ ಸಮಿತಿಯನ್ನು ರಚಿಸಲಾಗಿತ್ತು.

ಹೈಕೋರ್ಟ್ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವುದನ್ನು ಕುರಿತ ಅರ್ಜಿಯ ವಿಚಾರಣೆ ನಡೆಸುತ್ತಿತ್ತು. ಸೆಲ್ಯೂಲಾಟ್ ಟವರ್‌ಗಳು ಮತ್ತು ಮೊಬೈಲ್ ಫೋನ್‌ಗಳ ವಿಕಿರಣಗಳಿಂದ ತಲೆನೋವು, ಕ್ಯಾನ್ಸರ್, ಮೆದುಳಿನ ಚಟುವಟಿಕೆಯಲ್ಲಿ ಬದಲಾವಣೆಗಳು, ನಿದ್ರೆಯ ಅವ್ಯವಸ್ಥೆಗಳು ಮತ್ತು ಖಿನ್ನತೆ ಮುಂತಾದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರ ಆತಂಕಗಳನ್ನು ಕುರಿತು ಪರಿಶೀಲನೆಗೆ ಸಮಿತಿಯನ್ನು ರಚಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ