ಸರಕುಗಳ ವೇಗದ ಸಾಗಣೆಗೆ ಬಹುಮಾದರಿ ಸಾರಿಗೆ ಸಂಸ್ಥೆ: ಸುರೇಶ್ ಪ್ರಭು

ಶುಕ್ರವಾರ, 19 ಡಿಸೆಂಬರ್ 2014 (17:27 IST)
ರೈಲು, ಜಲ, ವಾಯು ಮತ್ತು ರಸ್ತೆ ಮಾರ್ಗವಾಗಿ ಸರಕುಗಳ ವೇಗದ ಸಾಗಣೆಗೆ ಬಹುಮಾದರಿ ಸಾರಿಗೆ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ತಿಳಿಸಿದ್ದಾರೆ. 
 
 ಇದರಿಂದ ರೈತರಿಗೆ ಮತ್ತು ಕೃಷಿಕರಿಗೆ ಉತ್ತಮ ದರ ಸಿಗಲು ನೆರವಾಗುತ್ತದೆ ಮತ್ತು ಸಂಪುಟದ ಪ್ರಸ್ತಾವನೆ ಕುರಿತು ಸರ್ಕಾರ ಈಗಾಗಲೇ ಚಿಂತನೆ ನಡೆಸಿದೆ.ಆಹಾರ ಸಂಸ್ಕರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಪ್ರಭು, ನಾವು ಉತ್ತಮ ಸಾಗಣೆ ಮತ್ತು ಪೂರೈಕೆ ಸರಪಣಿ ಮೂಲಸೌಲಭ್ಯ ಒದಗಿಸಲು ಬಯಸಿದ್ದೇವೆ.

ಅದಕ್ಕಾಹಿ ಬಹು ಮಾದರಿ ಸಾರಿಗೆ ಸಂಸ್ಥೆಯನ್ನು ಸರಕುಗಳ ಸಾಗಣೆಗೆ ಸ್ಥಾಪಿಸುವ ಬಗ್ಗೆ ಯೋಜಿಸಿದ್ದೇವೆ. ಇವು ರಸ್ತೆ, ರೈಲು, ವಾಯು ಮತ್ತು ಹಡಗು ಎಲ್ಲಾ ನಾಲ್ಕು ಮಾರ್ಗಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಈ ಬಹುಮಾದರಿ ಸಾರಿಗೆ ಸಂಸ್ಥೆ ಸ್ಥಾಪನೆಗೆ ಸರ್ಕಾರ ಕ್ಯಾಬಿನೆಟ್ ಟಿಪ್ಪಣಿಯನ್ನು ಮಂಡಿಸುತ್ತದೆ ಎಂದು ಹೇಳಿದರು. ಸರಕು ಸಾಗಣೆಗೆ ಯಾರು ಬಯಸುತ್ತಾರೋ, ಅವರು ಅಧಿಕಾರವರ್ಗವನ್ನು ಸಂಪರ್ಕಿಸಿದಾಗ ಸರಕು ಸಾಗಣೆಗೆ ಅನುಕೂಲ ಕಲ್ಪಿಸುತ್ತದೆ ಮತ್ತು ವೇಗವಾಗಿ ಮತ್ತು ವೆಚ್ಚ ಪರಿಣಾಮಕಾರಿಯಾಗಿ ಯಾವ ಮಾಧ್ಯಮದ ಮೂಲಕ ಸಾಗಣೆ ಮಾಡಬಹುದೆಂದು ತಿಳಿಸುತ್ತದೆ ಎಂದು ರೈಲ್ವೆಸಚಿವರು ಹೇಳಿದರು. 
 

ವೆಬ್ದುನಿಯಾವನ್ನು ಓದಿ