ಪರೋಕ್ಷ ತೆರಿಗೆ ಸಂಗ್ರಹವು ಶೇ. 35. 8ರಷ್ಟು ಹೆಚ್ಚಳ

ಶನಿವಾರ, 10 ಅಕ್ಟೋಬರ್ 2015 (14:55 IST)
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರವು ಮೊದಲ ಆರು ತಿಂಗಳಲ್ಲಿ ಶೇ. 35.8ರಷ್ಟು ಏರಿಕೆಯಾಗಿ 3.24 ಲಕ್ಷ ಕೋಟಿ ರೂ.ಗಳಿಗೆ ಮುಟ್ಟಿದೆ. ವಾರ್ಷಿಕ ಗುರಿಗಿಂತ ಶೇ. 50ರಷ್ಟು ಇದು ಹೆಚ್ಚಾಗಿದೆ.

ಪರೋಕ್ಷ ತೆರಿಗೆಯಲ್ಲಿ ಕೇಂದ್ರ ಅಬ್ಕಾರಿ, ಕಸ್ಟಮ್ಸ್ ಮತ್ತು ಸೇವಾ ತೆರಿಗೆ ಒಳಗೊಂಡಿದ್ದು, ಕಳೆದ ವಿತ್ತೀಯ ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಪರೋಕ್ಷ ತೆರಿಗೆ ಸಂಗ್ರಹವು 2.38 ಲಕ್ಷ ಕೋಟಿ ರೂ.ಗಳಾಗಿತ್ತು. 
 
2015-16ನೇ ಸಾಲಿನ ಬಜೆಟ್ ಅಂದಾಜಿಗೆ ನಿಗದಿ ಮಾಡಿದ್ದ ಗುರಿಗಿಂತ ಇದು ಶೇ. 50.6ರಷ್ಟು ಸಾಧನೆಯಾಗಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.  ಅಬ್ಕಾರಿ ತೆರಿಗೆ ಸಂಗ್ರಹದಲ್ಲಿ ಗರಿಷ್ಟ ಜಿಗಿತ ಶೇ. 69.6ರಷ್ಟಾಗಿದ್ದು 1,25, 530 ಕೋಟಿ ರೂ.ಗಳಾಗಿವೆ. ಕಸ್ಟಮ್ಸ್ ಸುಂಕ ಸಂಗ್ರಹವು ಶೇ. 17.5 ಏರಿಕೆಯಾಗಿದ್ದು, ಸೇವಾ ತೆರಿಗೆ ಸಂಗ್ರಹವು 24.3 ಶೇ. ಏರಿಕೆಯಾಗಿದೆ. 
 

ವೆಬ್ದುನಿಯಾವನ್ನು ಓದಿ