ಉಕ್ಕಿನ ಉತ್ಪನ್ನಗಳಿಗೆ ಶೇ. 10 ಆಮದು ಸುಂಕ ಹೆಚ್ಚಳಕ್ಕೆ ಕೋರಿಕೆ

ಗುರುವಾರ, 22 ಜನವರಿ 2015 (13:51 IST)
ಮುಂಬರುವ ಸಾಮಾನ್ಯ ಬಜೆಟ್‌ನಲ್ಲಿ ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳಿಗೆ ಶೇ. 10ರಷ್ಟು ಆಮದು ಸುಂಕ ಹೆಚ್ಚಳಕ್ಕೆ ಗಣಿಗಾರಿಕೆ ಮತ್ತು ಉಕ್ಕಿನ ಸಚಿವಾಲಯ ಕೋರಿದೆ. ಇದಲ್ಲದೇ ಕಬ್ಬಿಣದ ಅದಿರು ಮತ್ತು ಕೋಕಿಂಗ್ ಕಲ್ಲಿದ್ದಲು ಆಮದಿನ ಮೇಲೆ ಲೆವಿಯನ್ನು ಸಂಪೂರ್ಣ ಹಿಂತೆಗೆದುಕೊಳ್ಳುವಂತೆ ಕೋರಿದೆ.
 
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಕಳಿಸಿದ ಸಂದೇಶದಲ್ಲಿ ಉಕ್ಕು ಮತ್ತು ಗಣಿಗಾರಿಕೆ ಸಚಿವ ನರೇಂದ್ರ ಸಿಂಗ್ ತೋಮಾರ್  ಕಬ್ಬಿಣದ ಅದಿರು ಮೇಲಿನ ರಫ್ತು ಸುಂಕ ಕಡಿತಕ್ಕೆ ಒತ್ತಾಯಿಸಿಲ್ಲ. ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳ ಆಮದು ಸುಂಕ ಈಗ ಶೇ. 5ರಿಂದ 7.5 ನಡುವೆಯಿದ್ದು ಶೇ. 10ಕ್ಕೆ ಹೆಚ್ಚಿಸುವುದರಿಂದ ಮತ್ತು ಕಚ್ಚಾ ವಸ್ತುಗಳ ಆಮದಿಗೆ ಆಮದು ಸುಂಕ ಸಂಪೂರ್ಣ ತೆಗೆಯುವುದರಿಂದ ದೇಶೀಯ ಉಕ್ಕು ಉತ್ಪಾದಕರು ನಿಟ್ಟುಸಿರು ಬಿಡುವಂತಾಗುತ್ತದೆ.

ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳ ಮೇಲೆ ಆಮದುಸುಂಕ ಹೆಚ್ಚಳದಿಂದ ಚೀನಾದಿಂದ ಮುಕ್ತವಾಗಿ ಆಮದು ಹರಿದು ಬರುವುದನ್ನು ತಡೆಯುತ್ತದೆ. ಇದೇ ಸಂದರ್ಭದಲ್ಲಿ ಕಬ್ಬಿಣದ ಅದಿರು ಮತ್ತು ಕೋಕಿಂಗ್ ಕಲ್ಲಿದ್ದಲು ಮೇಲೆ ಆಮದು ಸುಂಕ ಹಿಂತೆಗೆತ ಕೂಡ ರಫ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದು ಅವರ ಉತ್ಪಾದನೆ ವೆಚ್ಚವನ್ನು ಕುಂಠಿತಗೊಳಿಸಿ ದೇಶೀಯ ಮಾರುಕಟ್ಟೆಯಲ್ಲಿ ಅವರ ಪಾಲನ್ನು ರಕ್ಷಿಸುತ್ತದೆ.

ವೆಬ್ದುನಿಯಾವನ್ನು ಓದಿ