ಪ್ರಧಾನಮಂತ್ರಿ ಜನಧನ್ ಯೋಜನೆಯಿಂದ ಎಟಿಎಂ ಯಂತ್ರಗಳು ದುಪ್ಪಟ್ಟು

ಗುರುವಾರ, 27 ನವೆಂಬರ್ 2014 (13:49 IST)
ಪ್ರಧಾನಮಂತ್ರಿ ಜನಧನ್ ಯೋಜನೆಯು ನಿಧಾನಗತಿಯ ಎಟಿಎಂ ಕೈಗಾರಿಕೆ ಜಾಲವನ್ನು ಎರಡು ವರ್ಷಗಳಲ್ಲಿ 3 ಲಕ್ಷಕ್ಕೆ ದುಪ್ಪಟ್ಟುಗೊಳಿಸಲು ಅವಕಾಶ ಒದಗಿಸಿದೆ. ಎಟಿಎಂ ನಿಯೋಜಕರು ವಹಿವಾಟಿನ ಗಾತ್ರಗಳಲ್ಲಿ  ಕುಸಿತ ಕಾಣುತ್ತಿದ್ದು, ಎಚ್‌ಡಿಎಫ್‌ಸಿ ಮತ್ತು ಆಕ್ಸಿಸ್ ಮುಂತಾದ ಖಾಸಗಿ ಬ್ಯಾಂಕುಗಳು ಎಟಿಎಂ ಯಂತ್ರಗಳ ನಿಯೋಜನೆಯಲ್ಲಿ ನಿಧಾನಗತಿ ಅನುಸರಿಸುತ್ತಿರುವುದರಿಂದ ಇದೊಂದು ದೊಡ್ಡ ಸವಾಲಾಗಿದೆ. 
 
ಕೆಲವು ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಪ್ರಸಕ್ತ 40.9 ಕೋಟಿ ಕಾರ್ಡುದಾರರ ನೆಲೆಯಿಂದ ಹೆಚ್ಚುವರಿ 15 ಕೋಟಿ ರುಪೇ ಡೆಬಿಟ್ ಕಾರ್ಡ್‌‍ಗಳು ಸೇರ್ಪಡೆಯಾಗಲಿರುವುದು ಎಟಿಎಂ ಕಂಪನಿಗಳಿಗೆ ಅವಕಾಶ ಒದಗಿಸಿದೆ., ಕಾರ್ಡ್‌ಗಳ ಸಂಖ್ಯೆ ಹೆಚ್ಚಳದಿಂದ ಎಟಿಎಂ ಬೇಡಿಕೆ ಕೂಡ ವರ್ಧಿಸುತ್ತದೆಂದು ಭಾವಿಸಲಾಗಿದೆ. ಆದರೆ ಎಟಿಎಂ ನಿಯೋಜನೆ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಹೊಸ ಯಂತ್ರಗಳು 100ಕ್ಕಿಂತ ಕಡಿಮೆ ದಿನನಿತ್ಯದ ವಹಿವಾಟುಗಳನ್ನು ಕಾಣುತ್ತಿದೆ.
 
 ಎಟಿಎಂ ಜಾಲಗಳ ಹೆಚ್ಚಳವೂ ಈ ಕುಸಿತಕ್ಕೆ ಕಾರಣವಾಗಿದೆ. ಇದಲ್ಲದೇ ತಿಂಗಳಲ್ಲಿ ಉಚಿತ ವಹಿವಾಟುಗಳ ಸಂಖ್ಯೆಗೆ ಎಸ್‌ಬಿಐ ವಿಧಿಸಿದ ಮಿತಿ ಮತ್ತು ಆಕ್ಸಿಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಮುಂದಿನ ತಿಂಗಳಿಂದ ಉಚಿತ ಹಣ ಹಿಂತೆಗೆದುಕೊಳ್ಳುವಿಕೆ ಮೇಲಿನ ನಿರ್ಬಂಧ ಕೂಡ ವಹಿವಾಟುಗಳ ಕುಸಿತ ಉಂಟಾಗುವ ಭಯ ಆವರಿಸಿದೆ. 

ವೆಬ್ದುನಿಯಾವನ್ನು ಓದಿ