ಗ್ರಾಹಕ ರಕ್ಷಣಾ ನಿಯಮ ಉಲ್ಲಂಘಿಸಿದ ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾಗೆ ದಂಡ

ಗುರುವಾರ, 18 ಡಿಸೆಂಬರ್ 2014 (12:26 IST)
ಗ್ರಾಹಕ ರಕ್ಷಣೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾಗೆ ರಿಸರ್ವ್ ಬ್ಯಾಂಕ್ ದಂಡ ವಿಧಿಸಿದೆ. ಗ್ರಾಹಕ ರಕ್ಷಣೆ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ವಂಚನೆಗಾರರು ನಕಲಿ ಚೆಕ್‌ಗಳನ್ನು ಮತ್ತು ಪೋಸ್ಟರ್ ಆರ್ಡರ್‌ಗಳನ್ನು ನೀಡಿ ಕಳೆದ ಎರಡು ವರ್ಷಗಳಿಂದ ಹಣ ಪಡೆಯಲು ಅವಕಾಶವಾಗಿತ್ತು.

ದೇಶದ ಸಾಲ ನೀಡುವ ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಹೇರುವ ಆರ್‌ಬಿಐ, ಐಸಿಸಿಐಗೆ 50 ಲಕ್ಷ ರೂ. ಮತ್ತು ಬ್ಯಾಂಕ್ ಆಫ್ ಬರೋಡಾಗೆ 25 ಲಕ್ಷ ರೂ. ದಂಡ ಹೇರಿದೆ. ಐದು ಬ್ಯಾಂಕ್‌‍ಗಳಲ್ಲಿ ವಂಚನೆಗೆ ಸಂಬಂಧಿಸಿದ ದೂರು ಬಂದಿದ್ದರಿಂದ ಆರ್‌ಬಿಐ ಮೇಲಿನ ಕ್ರಮ ಕೈಗೊಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ ಮತ್ತು ಆಕ್ಸಿಸ್ ಬ್ಯಾಂಕ್‌ಗಳಲ್ಲಿ ಕೂಡ ವಂಚನೆಯ ದೂರು ಬಂದಿತ್ತು. ರಿಸರ್ವ್ ಬ್ಯಾಂಕ್ ಕೊನೆಯ ಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿಲ್ಲ. ಆದರೆ 'ನಿಮ್ಮ ಗ್ರಾಹಕರನ್ನು ತಿಳಿಯಿರಿ 'ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಎಚ್ಚರಿಸಿದೆ.

ವೆಬ್ದುನಿಯಾವನ್ನು ಓದಿ