ಅಧಿಕ ಮೌಲ್ಯದ ಚೆಕ್ ಕ್ಲಿಯರ್ ಮುಂಚೆ ಖಾತೆದಾರರಿಗೆ ಕರೆ: ರಿಸರ್ವ್ ಬ್ಯಾಂಕ್

ಶುಕ್ರವಾರ, 7 ನವೆಂಬರ್ 2014 (14:57 IST)
ಚೆಕ್‌ಗೆ ಸಂಬಂಧಿಸಿದ ವಂಚನೆ ಪ್ರಕರಣಗಳನ್ನು ತಡೆಯಲು ರಿಸರ್ವ್ ಬ್ಯಾಂಕ್ ಅಧಿಕ ಮೌಲ್ಯದ ಚೆಕ್ ಪಾವತಿಗಳನ್ನು ಕ್ಲಿಯರ್ ಮಾಡುವ ಮುಂಚೆ ಖಾತೆದಾರರಿಗೆ ದೂರವಾಣಿ ಕರೆ ಮೂಲಕ ಎಚ್ಚರಿಸಬೇಕು ಎಂದು ಬ್ಯಾಂಕುಗಳಿಗೆ ಸೂಚಿಸಿದೆ.
 
ಕ್ಲಿಯರಿಂಗ್‌ಗೆ ಚೆಕ್ ಸ್ವೀಕರಿಸಿದ ಕೂಡಲೇ ಚೆಕ್ ಮೂಲಕ ಹಣ ನೀಡುತ್ತಿರುವವರಿಗೆ ಎಸ್‌ಎಂಎಸ್  ಅಲರ್ಟ್ ಕಳಿಸಬೇಕು ಮತ್ತು 2 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯಗಳ ಚೆಕ್ ಕ್ಲಿಯರೆನ್ಸ್ ಮಾಡುವ ಮುಂಚೆ ಯುವಿ ಲ್ಯಾಂಪ್‌ನಡಿ ಪರಿಶೀಲಿಸಬೇಕು ಎಂದು ಹೇಳಿದೆ.
.
5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್ ಕ್ಲಿಯರಿಂಗ್ ಮುಂಚೆ ಬಹು ಬಗೆಯ ಪರೀಕ್ಷೆಗಳನ್ನು ಮಾಡಬೇಕು ಎಂದೂ ತಿಳಿಸಿದೆ. ಬ್ಯಾಂಕುಗಳು ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಬಹುದು. ಅನುಮಾನಾಸ್ಪಾದ ಬಹುಮೌಲ್ಯದ ಚೆಕ್‌ಗಳ ಬಗ್ಗೆ ಗ್ರಾಹಕರಿಗೆ ದೂರವಾಣಿ ಕರೆ ಮೂಲಕ ಎಚ್ಚರಿಸಬೇಕು ಮತ್ತು ಖಾತೆದಾರರಿಂದ ದೃಢೀಕರಣ ಪಡೆಯಬೇಕು. ಸ್ಥಳೀಯವಲ್ಲದ ಚೆಕ್‌ಗಳಾಗಿದ್ದರೆ ಮೂಲ ಶಾಖೆಯನ್ನು ಸಂಪರ್ಕಿಸಬೇಕು ಎಂದು ಆರ್‌ಬಿಐ ಬ್ಯಾಂಕುಗಳಿಗೆ ನೀಡಿದ ಸೂಚನೆಯಲ್ಲಿ ತಿಳಿಸಿದೆ.

ಚೆಕ್ ಸಂಬಂಧಿತ ವಂಚನೆ ಪ್ರಕರಣಗಳ ಹೆಚ್ಚಳ ತಡೆಯಲು ಸೂಚನೆಗಳನ್ನು ಆರ್‌ಬಿಐ ನೀಡಿದೆ. ಮೂಲ ಚೆಕ್‌ಗಳು ಖಾತೆದಾರರ ವಶದಲ್ಲಿದ್ದರಲೂ ಅದೇ ಸೀರೀಸ್ ಚೆಕ್‌ಗಳನ್ನು ವಂಚಕರು ಹಾಜರುಪಡಿಸಿದ ಪ್ರಕರಣಗಳು ವರದಿಯಾಗಿದೆ ಎಂದು ಆರ್‌‍ಬಿಐ ತಿಳಿಸಿದೆ.

ವೆಬ್ದುನಿಯಾವನ್ನು ಓದಿ