ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 26 ಪೈಸೆ ಚೇತರಿಕೆ

ಗುರುವಾರ, 27 ಆಗಸ್ಟ್ 2015 (18:51 IST)
ಅಮೆರಿಕದ ಕರೆನ್ಸಿಯ ಮಾರಾಟದ ಭರಾಟೆಯಿಂದ ಗುರುವಾರ ಅಂತರಬ್ಯಾಂಕ್ ವಿದೇಶಿ ವಿನಿಮಯ ಪೇಟೆಯಲ್ಲಿ ರೂಪಾಯಿ 26 ಪೈಸೆ ಚೇತರಿಸಿಕೊಂಡು 65. 88 ರೂ.ಗಳನ್ನು ಮುಟ್ಟಿದೆ.

ರಫ್ತುದಾರರು ಮತ್ತು ಬ್ಯಾಂಕ್‌ಗಳಿಂದ ಅಮೆರಿಕದ ಕರೆನ್ಸಿ ಮಾರಾಟವಲ್ಲದೇ ಇತರೆ ಕರೆನ್ಸಿಗಳ ವಿರುದ್ಧ ಡಾಲರ್ ದುರ್ಬಲತೆ ಕೂಡ ರೂಪಾಯಿಗೆ ಬೆಂಬಲ ನೀಡಿತು ಎಂದು ಫಾರೆಕ್ಸ್ ವ್ಯಾಪಾರಿಗಳು ಹೇಳಿದ್ದಾರೆ. 
 
ಶೀಯ ಶೇರುಪೇಟೆ ಕೂಡ ದೃಢ ಆರಂಭ ಕಂಡಿದ್ದರಿಂದ ರೂಪಾಯಿ ಏರುಮುಖ ಪ್ರವೃತ್ತಿಗೆ ಪ್ರಭಾವ ಬೀರಿತು ಎಂದು ಅವು ಹೇಳಿವೆ. ಹಿಂದಿನ ಸೆಷನ್‌ನಲ್ಲಿ  ರೂಪಾಯಿಯು ಡಾಲರ್ ವಿರುದ್ಧ 4 ಪೈಸೆ ಕಳೆದುಕೊಂಡ ರೂಪಾಯಿ 66.14 ಕ್ಕೆ ಮುಕ್ತಾಯವಾಗಿತ್ತು. ಜಾಗತಿಕ ಏರುಪೇರಿನ ಮಧ್ಯೆ ಆಮದುದಾರರ ನವೀಕೃತ ಡಾಲರ್ ಬೇಡಿಕೆ ಇದಕ್ಕೆ ಕಾರಣವಾಗಿತ್ತು. 

ವೆಬ್ದುನಿಯಾವನ್ನು ಓದಿ