ಸುಧಾರಣೆಯಾಗಿ ಅಥವಾ ಬಸ್ ಮಿಸ್ ಮಾಡಿಕೊಳ್ಳಿ: ಅರುಣ್ ಜೇಟ್ಲಿ ಎಚ್ಚರಿಕೆ

ಭಾನುವಾರ, 21 ಡಿಸೆಂಬರ್ 2014 (16:19 IST)
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಜಿಎಸ್‌ಟಿ ಮಸೂದೆಯ ಸುಗಮ ಅನುಮೋದನೆಗೆ ಸಾರ್ವಜನಿಕ ಅಭಿಪ್ರಾಯ ಪಡೆಯುವಂತೆ ಕಾರ್ಪೊರೇಟ್‌  ಸಂಸ್ಥೆಗಳಿಗೆ ಕರೆ ನೀಡಿದ್ದಾರೆ. ಲೋಕಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡಿಸಿದ ಮರುದಿನವೇ ಉದ್ಯಮಪತಿಗಳಿಗೆ ಅವರ ಕರೆ ಹೊರಬಿದ್ದಿದೆ.
 
 87ನೇ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟದ 87ನೇ ಎಜಿಎಂ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಇಂದು ನಮ್ಮ ನಡುವೆ ಸ್ಪಷ್ಟ ಆಯ್ಕೆಯಿದೆ. ಸುಧಾರಣೆಯಾಗಿ ಅಥವಾ ಬಸ್ ಮಿಸ್ ಮಾಡಿಕೊಂಡು ಅವಕಾಶ ಕಳೆದುಕೊಳ್ಳಿ. ನಾವು ಸುಧಾರಣೆಯ ಬಸ್ ತಪ್ಪಿಸಿಕೊಂಡರೆ ಭವಿಷ್ಯದ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು. 
 
ಸುಧಾರಣೆ ಕ್ರಮಗಳಿಗೆ ವಿಶೇಷವಾಗಿ ರಾಜ್ಯಸಭೆಯಲ್ಲಿ ಅಡ್ಡಿವುಂಟುಮಾಡಲು ಸೈದ್ದಾಂತಿಕ ವಿರೋಧಿ ಪಕ್ಷಗಳು ವಿಚಿತ್ರವಾಗಿ ಜೊತೆಗೂಡುವ ಪರಿಯನ್ನು ಉಲ್ಲೇಖಿಸಿ ಅವರು ಮಾತನಾಡುತ್ತಿದ್ದರು.
 
ವಿಮಾ ಕ್ಷೇತ್ರವನ್ನು ವಿದೇಶಿ ನೇರ ಹೂಡಿಕೆಗೆ ತೆರೆದಿಡುವುದು ಮುಂತಾದ ಸ್ವರೂಪದ ಸುಧಾರಣೆಗಳಿಗೆ ವಿಳಂಬ ಉಂಟುಮಾಡುವ ಪ್ರಯತ್ನಗಳನ್ನು ಸರ್ಕಾರ ಬೆಂಬಲಿಸುವುದಿಲ್ಲ ಎಂದು ಜೇಟ್ಲಿ ಪ್ರತಿಪಾದಿಸಿದರು.

ವಿದೇಶಿ ಹೂಡಿಕೆದಾರರು ಈ ಕುರಿತು ಸುದೀರ್ಘಕಾಲದಿಂದ ಕಾಯುತ್ತಿದ್ದು, ಸುಧಾರಣೆಗೆ ಬದ್ಧವಾದ ಸರ್ಕಾರ ವಿಮಾ ವಲಯದ ಸುಧಾರಣೆ ಸಾಧ್ಯವಾಗುತ್ತಿಲ್ಲ ಎಂಬ ಸತ್ಯದಿಂದ ಅಚ್ಚರಿಗೊಂಡಿದ್ದಾರೆ.  ಇದೊಂದು ಸವಾಲಾಗಿದ್ದು, ನಾವು ಇದನ್ನು ಮುಂದುವರಿಸಲು ಅವಕಾಶ ನೀಡಬೇಕೇ ಎಂದು ಪ್ರಶ್ನಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ