ದೈತ್ಯ ಕಂಪನಿಗಳ ಪಟ್ಟಿಯಲ್ಲಿ ಭಾರತದ ಏಳು ಕಂಪನಿಗಳು

ಗುರುವಾರ, 23 ಜುಲೈ 2015 (16:55 IST)
ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಮೋಟರ್ಸ್ ಸೇರಿದಂತೆ, ಭಾರತದ ಏಳು ಕಂಪನಿಗಳು ವಿಶ್ವದ 500 ಅತೀ ಡೊಡ್ಡ ಕಂಪನಿಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. ಫಾರ್ಚ್ಯೂನ್ ಈ ಪಟ್ಟಿಯನ್ನು ಸಂಗ್ರಹಿಸಿದ್ದು, ಚಿಲ್ಲರೆ ಮಾರಾಟ ದೈತ್ಯ ವಾಲ್ಮಾರ್ಟ್ ಇವುಗಳ ಪೈಕಿ ಟಾಪ್ ಸ್ಥಾನದಲ್ಲಿದೆ.

2015ರ ಫಾರ್ಚ್ಯೂನ್ ಜಾಗತಿಕ 500 ಪಟ್ಟಿಯಲ್ಲಿರುವ ಭಾರತದ ಕಂಪನಿಗಳ ಪೈಕಿ ಇಂಡಿಯನ್ ಆಯಿಲ್ 119ನೇ ಸ್ಥಾನದಲ್ಲಿದ್ದು 74 ಶತಕೋಟಿ ಡಾಲರ್ ಆದಾಯ ಹೊಂದಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ (158 ನೇ ಸ್ಥಾನ) 62 ಶತಕೋಟಿ ಡಾಲರ್ ಆದಾಯ ಹೊಂದಿದೆ.

 ಟಾಟಾ ಮೋಟರ್ಸ್ 42 ಶತಕೋಟಿ ಡಾಲರ್ ಆದಾಯ (254), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( 42 ಶತಕೋಟಿ ಡಾಲರ್ ಆದಾಯ(260),  ಭಾರತ್ ಪೆಟ್ರೋಲಿಯಂ 35 ಶತಕೋಟಿ ಡಾಲರ್ ಆದಾಯದೊಂದಿಗೆ  280ನೇ ಸ್ಥಾನ,  ಹಿಂದೂಸ್ಥಾನ್ ಪೆಟ್ರೋಲಿಯಂ 35 ಶತಕೋಟಿ ಡಾಲರ್ ಆದಾಯ ಮತ್ತು ತೈಲ ಮತ್ತು ನೈಸರ್ಗಿಕ ಅನಿಲವು 26 ಶತಕೋಟಿ ಡಾಲರ್ ಆದಾಯ(449) ಹೊಂದಿದೆ. 
 
ಪಟ್ಟಿಯಲ್ಲಿ ವಾಲ್ಮಾರ್ಟ್ ಅಗ್ರ ಸ್ಥಾನದಲ್ಲಿದ್ದು, ಚೀನಾದ ಪೆಟ್ರೋಲಿಯಂ ಸಂಸ್ಕರಣೆ ದೈತ್ಯ ಸೈನೋಪೆಕ್ ಗ್ರೂಪ್ ಎರಡನೇ ಸ್ಥಾನದಲ್ಲಿದೆ. ನೆದರ್ ಲೆಂಡ್ ಮೂಲದ ರಾಯಲ್ ಡಚ್ ಶೆಲ್ (3), ಚೀನಾ ರಾಷ್ಟ್ರೀಯ ಪೆಟ್ರೋಲಿಯಂ (4) ಮತ್ತು ಎಕ್ಸಾನ್ ಮೊಬಿಲ್ (5)ನೇ ಸ್ಥಾನದಲ್ಲಿವೆ. 
 
ಅಮೆರಿಕದ 128 ಕಂಪನಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಆಪಲ್ (15), ಜೆಪಿ ಮೋರ್ಗಾನ್ ಚೇಸ್(61), ಐಬಿಎಂ(82), ಮೈಕ್ರೋಸಾಫ್ಟ್ (95), ಗೂಗಲ್ (124), ಪೆಪ್ಸಿ(141), ಇಂಟೆಲ್ (182) ಮತ್ತು ಗೋಲ್ಡ್‌ಮನ್ ಸಚ್ಸ್(278) ನೇ ಸ್ಥಾನದಲ್ಲಿವೆ. 

ವೆಬ್ದುನಿಯಾವನ್ನು ಓದಿ