ಸಾವಿರಾರು ಕೋಟಿ ಸಾಲ ತೀರಿಸದೇ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಪಡೆದುಕೊಂಡಿದ್ದ ಸಾಲದ ಹಣವನ್ನು ವಾಪಸ್ ಪಡೆಯಲು ಬ್ಯಾಂಕ್‌ಗಳು ದೇಶದಲ್ಲಿರುವ ಅವರ ಆಸ್ತಿಯನ್ನು ಹರಾಜಿಗಿಡುತ್ತಿವೆ. ಕಿಂಗ್ ಫಿಶರ್ ಹೌಸ್‌ನ್ನು ಕೊಳ್ಳುವವರು ಯಾರು ಇಲ್ಲವಾಗಿದೆ. ಅವರ ಹೌಸ್‌ನ್ನು ಮೂರನೆಯ ಬಾರಿಗೆ ಹರಾಜಿಗ್ಗಿಟ್ಟಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಮತ್ತೆ ನಿರಾಶೆಯಾಗಿದೆ.
ಮುಂಬೈನ ಪ್ಲಶ್ ವಿಲ್ಲೆ ಪಾರ್ಲೆ ಏರಿಯಾದಲ್ಲಿ ಈ ಬಂಗಲೆ ಇದ್ದು ಕಳೆದ ಮಾರ್ಚ್ ತಿಂಗಳಲ್ಲಿ ಎಸ್‌ಬಿಐ ಇದನ್ನು 1500ಕೋಟಿ ಮೊತ್ತಕ್ಕೆ ಹರಾಜಿಗಿಟ್ಟಿತ್ತು. ಆದರೆ ಯಾರು ಕೂಡ ಬಂಗಲೆ ಖರೀದಿಸಲು ಮುಂದೆ ಬಂದಿರಲಿಲ್ಲ. ಹೀಗಾಗಿ ಬೆಲೆಯನ್ನು 10% ತಗ್ಗಿಸಿ 130ಕೋಟಿಗೆ ಎರಡನೆಯ ಬಾರಿಗೆ ಹರಾಜು ಕೂಗಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಮತ್ತೀಗ 15% ಪ್ರತಿಶತ ತಗ್ಗಿಸಿ 115ಕೋಟಿಗೆ ಹರಾಜಿಗಿಟ್ಟಿತ್ತು. ಆದರೆ ಹಿಂದಿನಂತೆ ವಿಫಲತೆ ಕಂಡಿದೆ. ಬಂಗಲೆಯನ್ನು ಕೊಳ್ಳುವವರೇ ಇಲ್ಲವಾಗಿದೆ.