ನಿಮ್ಮ ಫೋನ್ ಬ್ಯಾಟರಿ ಆರೋಗ್ಯಕ್ಕೆ ಕ್ಯಾರೆಟ್ ಬಳಸಿ!

ಗುರುವಾರ, 5 ಮೇ 2016 (11:02 IST)
ಇದು ನೀಮಗೆ ಗೊತ್ತೆ? ಕ್ಯಾರೆಟ್ ಹೆಸರಿನ ಹೊಸ ವೈಶಿಷ್ಟ್ಯದ ಉಚಿತ ಅಪ್ಲಿಕೇಶನ್ ಅನಾವರಣಗೊಂಡಿದ್ದು, ಈ ಅಪ್ಲಿಕೇಶನ್ ನಿಮ್ಮ ಸ್ಮಾರ್ಟ್‌ಪೋನ್ ಸಾಮರ್ಥ್ಯವನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ.

ಈ ಹೊಸ ವೈಶಿಷ್ಟ್ಯದ ಅಪ್ಲಿಕೇಶನ್, ಒಂದು ವಾರದ ಅವದಿಯಲ್ಲಿ ಸ್ಮಾರ್ಟ್‌ಪೋನ್ ಬ್ಯಾಟರಿ ಬಳಕೆಯನ್ನು ಪರಿಶೀಲನೆ ಮಾಡಿ, ವರದಿಯನ್ನು ನೀಡುತ್ತದೆ.  
 
ಕ್ಯಾರೆಟ್ ಅಪ್ಲಿಕೇಶನ್ ಜಿಪಿಎಸ್‌ ಮತ್ತು ಯಾವುದೇ ಸಾಮರ್ಥ್ಯವನ್ನು ಬಳಸಿಕೊಳ್ಳದೆ ಕಾರ್ಯ ನಿರ್ವಹಿಸುತ್ತದೆ. 
 
ಈ ಅಪ್ಲಿಕೇಶನ್, ನಿಮ್ಮ ಸ್ಮಾರ್ಟ್‌ಪೋನ್ ಬ್ಯಾಟರಿ ಬಳಕೆ ಸಾಮಾನ್ಯವಾಗಿರುವುದನ್ನು ತೋರಿಸುತ್ತದೆ. ಒಂದು ವೇಳೆ, ನಿಮ್ಮ ಸ್ಮಾರ್ಟ್‌ಪೋನ್ ಬ್ಯಾಟರಿ ಬಳಕೆ ಸಾಮಾನ್ಯವಾಗಿರದಿದ್ದರೆ, ಬಳಕೆದಾರರಿಗೆ ಕೆಲವು ಮಾರ್ಗದರ್ಶನಗಳನ್ನು ನೀಡುತ್ತದೆ.
 
ಆಂಡ್ರಾಯ್ಡ್ 5.0 ಮತ್ತು 6.0 ಸೇರಿದಂತೆ ಹೊಸ ಆವೃತ್ತಿಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ ಹೊಂದಿರುವ ಸ್ಮಾರ್ಟ್‌ಪೋನ್‌ಗಳಲ್ಲಿ ಹೊಸ ವೈಶಿಷ್ಟ್ಯದ ಕ್ಯಾರೆಟ್ ಅಪ್ಲಿಕೇಶನ್‌ ಸೇವೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.
 
ಆಂಡ್ರಾಯ್ಡ್ ಸಾಧನಗ ಗೂಗಲ್ ಪ್ಲೇ ಮತ್ತು ಐಒಎಸ್ ಡಿವೈಸ್‌ಗಳ ಆಪ್ ಸ್ಟೋರ್ ಮೂಲಕ ಬಳಕೆದಾರರು ಹೊಸ ವೈಶಿಷ್ಟ್ಯದ ಕ್ಯಾರೆಟ್ ಆಪ್ಲಿಕೇಶನನ್ನು ಡೌನ್‌ಲೋಟ್ ಮಾಡಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ