ವೈ-ಫೈಗಿಂತ 100 ಪಟ್ಟು ವೇಗದ ಲೈಫೈ ಅಂತರ್ಜಾಲ ತಂತ್ರಜ್ಞಾನ

ಶುಕ್ರವಾರ, 27 ನವೆಂಬರ್ 2015 (16:08 IST)
ಸಾಂಪ್ರದಾಯಿಕ ವೈಫೈ ತಂತ್ರಜ್ಞಾನಕ್ಕಿಂತ 100 ಪಟ್ಟು ವೇಗದಲ್ಲಿ ಸಂಪರ್ಕ ಕೊಡುವ ವೈರ್‌ಲೆಸ್ ಅಂತರ್ಜಾಲ ತಂತ್ರಜ್ಞಾನದ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ.  ಈ ತಂತ್ರಜ್ಞಾನವನ್ನು ಲೈಫೈ ಎಂದು ಕರೆಯಲಾಗುತ್ತಿತ್ತು, ಎಸ್ಟೋನಿಯನ್ ಸ್ಟಾರ್ಟ್ ಅಪ್ ವೆಲ್‌ಮೆನ್ನಿ ಇದನ್ನು ಪರೀಕ್ಷಿಸಿದ್ದು, ಕಚೇರಿಗಳಲ್ಲಿ ಇದರ ಟ್ರಯಲ್ ನಡೆಸುತ್ತಿದೆ.  ಲೈಫ್ 1 ಜಿಬಿಪಿಎಸ್ ವೇಗದಲ್ಲಿ ದತ್ತಾಂಶವನ್ನು ಕಳಿಸುವ ಸಾಮರ್ಥ್ಯ ಹೊಂದಿದ್ದು, ಪ್ರಸಕ್ತ ವೈ-ಫೈ ಸಂಪರ್ಕಕ್ಕಿಂತ 100 ಪಟ್ಟು ವೇಗದಿಂದ ಕೂಡಿದೆ.
 
 ಇಂತಹ ವೇಗದಲ್ಲಿ ಆಲ್ಬಮ್, ಅತ್ಯಂತ ಸ್ಪಷ್ಟ ಚಿತ್ರಗಳು ಮತ್ತು ವಿಡಿಯೋ ಗೇಮ್‌ಗಳನ್ನು ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಬಹುದು. ವಿಸಿಬಲ್ ಲೈಟ್ ಸಂಪರ್ಕದ ಮೂಲಕ ದತ್ತಾಂಶವನ್ನು ಇದು ಸಾಗಿಸುತ್ತದೆ.  ಎಲ್‌ಇಡಿ ಬೆಳಕಿನ ಮೂಲಕ ಜಾಲಗಳ ನಡುವೆ ದತ್ತಾಂಶವನ್ನು ಇದು ಕಳಿಸುತ್ತದೆ. ಹೆಚ್ಚಿದ ವೇಗದಿಂದ ಕೆಲವು ಅಪ್ಲಿಕೇಷನ್‌ಗಳಿಗೆ ಪ್ರಸಕ್ತ ತಂತ್ರಜ್ಞಾನದಲ್ಲಿ ದೊಡ್ಡ ಸುಧಾರಣೆಯಾಗಿದೆ. 
 
 ಎಡಿನ್‌ಬರ್ಗ್ ವಿವಿಯ ಪ್ರೊ. ಹೆರಾಲ್ಡ್ ಹಾಸ್ ಈ ತಂತ್ರಜ್ಞಾನದ ಪ್ರವರ್ತಕರಾಗಿದ್ದು, 2011ರಲ್ಲಿ ಲೈಫೈ ಎಂದು ಹೆಸರಿಟ್ಟಿದ್ದರು.ಆದರೆ ನೈಜ ಜಗತ್ತಿನಲ್ಲಿ ಇದು ಮೊದಲ ಬಾರಿಗೆ ಬಳಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ