ನಿಮ್ಮ ಮೊಬೈಲಲ್ಲಿ ’ಟಾಪ್-10 ಮೊಬೈಲ್ಸ್’ ಆಪ್ ಇದಿಯಾ?

ಬುಧವಾರ, 30 ನವೆಂಬರ್ 2016 (08:34 IST)
ಗೂಗಲ್ ಪ್ಲೇಸ್ಟೋರ್‌ಗೆ ಹೋದ್ರೆ ಸಾವಿರಾರು ಆಪ್ ಗಳು ಕಣ್ಣು ಕುಕ್ಕುತ್ತವೆ. ಆದರೆ ನಮಗೆ ಅವಶ್ಯಕತೆ ಇರೋಂತ ಆಪ್‌ಗಳು ಹುಡುಕೋದು ಸವಾಲಿನ ಕೆಲಸ. ಉದಾಹರಣೆಗೆ ಹೆಳ್ಬೇಕು ಅಂದ್ರೆ 15 ಸಾವಿರ ರೂಪಾಯಿ ಒಳಗೆ ಒಂದು ಮೊಬೈಲ್ ತಗೋಬೇಕು ಅಂದ್ಕೊಂಡಿದ್ದೀರಿ ಅಂದ್ಕೊಳ್ಳಿ. 
 
ಆಗ ಗೆಳೆಯರು, ಇಂಟರ್ನೆಟ್ಟು ಅಲ್ಲಿ ಇಲ್ಲಿ ಹುಡುಕಾಡ್ತೀರ. ಆದರೂ ನಿಮಗೆ ಸಮಾಧಾನ ಆಗಲ್ಲ. ಯಾವ ಮೊಬೈಲ್ ಬೆಸ್ಟ್ ಅಂತ ತಿಳ್ಕೊಳ್ಳೋದು ಸ್ವಲ್ಪ ಕಷ್ಟದ ಕೆಲಸ. ಆದರೆ ಟಾಪ್-10 ಮೊಬೈಲ್ಸ್ ಆಪ್ ಇದ್ರೆ ಆ ಚಿಂತೆ ಕಾಡಲ್ಲ. 
 
ರೂ.15 ಸಾವಿರ ಒಳಗೆ ಟಾಪ್ 10 ಮೊಬೈಲ್ಸ್ ಯಾವುದು ಅಂತ ಕೇಳಿದ್ರೆ ಈ ಆಪ್ ಟಾಪ್ 10 ಮೊಬೈಲ್‍ಗಳನ್ನ ಸೂಚಿಸುತ್ತೆ. ಕೇವಲ ಮೊಬೈಲ್ ಅಷ್ಟೇ ಅಲ್ಲ ಲ್ಯಾಪ್‌ಟಾಪ್ ಯಾವುದೇ ಎಲೆಕ್ಟಾನಿಕ್ ವಸ್ತು ಇರಲಿ ಅತ್ಯುತ್ತಮ ಟಾಪ್ 10 ಆಯ್ಕೆ ಮಾಡಿ ನಿಮ್ಮ ಮುಂದಿಡುತ್ತೆ. ಇದಿಷ್ಟೇ ಅಲ್ಲದೆ ಈ ಆಪ್‌ನಲ್ಲಿ ಇನ್ನಷ್ಟು ವಿಶೇಷತೆಗಳೂ ಇವೆ. [ಡೌನ್ ಲೋಡ್ ಲಿಂಕ್]
 
* ಫ್ಲಿಪ್ ಕಾರ್ಟ್, ಈಬೇ, ಸ್ನಾಪ್‌ಡೀಲ್, ಶಾಪ್‍ಕ್ಲೂಸ್, ಅಮೆಜಾನ್‍ನಂತಹ ಇ-ಕಾಮರ್ಸ್ ಸೈಟ್‌ಗಳನ್ನ ಜಾಲಾಡಿ ಟಾಪ್ ಸೆಲ್ಲಿಂಗ್, ಪಾಪ್ಯುಲರ್ ಬ್ರ್ಯಾಂಡ್‌ಗಳನ್ನ ಸೂಚಿಸುತ್ತೆ.
* ನಮಗೆ ಅನುಕೂಲವಾದ ರೇಟಲ್ಲಿ ಸಿಗೋಂತ ಇಷ್ಟವಾದ ಬ್ರ್ಯಾಂಡ್‌ನಲ್ಲಿ ಬೇಕಾದ ಫೀಚರ್‌ವುಳ್ಳ ಪ್ರಾಡಕ್ಟ್‌ಗಳನ್ನ ಸರ್ಚ್ ಮಾಡಬಹುದು.
* ಇದರ ಜೊತೆಗೆ ಪ್ರಾಡಕ್ಟ್ ಕಂಪ್ಯಾರಿಷನ್ ಮಾಡೋ ಆಪ್ಟನ್ ಕೂಡ ಇದೆ.
* ಬೆಲೆಗಳ ನಡುವಿನ ವ್ಯತ್ಯಾಸವನ್ನೂ ತೋರಿಸುತ್ತೆ. ಇದರ ಜೊತೆಗೆ ಅವುಗಳ ವಿಮರ್ಶೆಯನ್ನೂ ಓದಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ