ಈ ವರ್ಷ ಅತಿ ಹೆಚ್ಚು ಹುಡುಕಾಡಿದ ಫೋನ್‌ಗಳು ಇವೆ

ಶನಿವಾರ, 17 ಡಿಸೆಂಬರ್ 2016 (10:29 IST)
ಜನಪ್ರಿಯ ಸರ್ಚ್ ಇಂಜಿನ್ ದಿಗ್ಗದ ಗೂಗಲ್ ಪ್ರತಿ ವರ್ಷ ವಿವಿಧ ಅಂಶಗಳ ಮೇಲೆ ನೆಟ್ಟಿಗರು ಹುಡುಕಾಟದ ಆಧಾರದ ಮೇಲೆ ಟಾಪ್ ಟ್ರೆಂಡಿಂಗ್ ಪಟ್ಟಿಯನ್ನು ಬಿಡುಗಡೇ ಮಾಡುತ್ತದೆ. 2016ರಲ್ಲಿ ನೆಟ್ಟಿಗರು ಅತಿ ಹೆಚ್ಚು ಹುಡುಕಾಡಿದ ಫೋನ್‌ಗಳು ಯಾವುದು ಎಂಬ ಪಟ್ಟಿಯನ್ನು ಗೂಗಲ್ ರಿಲೀಸ್ ಮಾಡಿದೆ. 
 
ಗೂಗಲ್ ಪ್ರಕಾರ ಕೇವಲ ರೂ. 250ಕ್ಕೆ ಫೋನ್ ಕೊಡ್ತೀವಿ ಎಂದು ಈ ವರ್ಷ ಸಂಚಲನ ಸೃಷ್ಟಿಸಿದ್ದು ಫ್ರೀಡಂ 251 ಫೋನ್ ಮೊದಲ ಸ್ಥಾನದಲ್ಲಿದೆ. ಅದು ಹೊರತುಪಡಿಸಿದರೆ ಎರಡನೇ ಸ್ಥಾನದಲ್ಲಿ ಆಪಲ್ ಐಫೋನ್ 7, ಮೂರನೇ ಸ್ಥಾನದಲ್ಲಿ ನೋಟ್ 3 ಸ್ಥಾನಪಡೆದಿವೆ. 
 
ಗೂಗಲ್ ಸರ್ಚ್‍ನ ಟಾಪ್ 10 ಫೋನ್‌ಗಳು
* ಫ್ರೀಡಂ 251
* ಐಫೋನ್ 7
* ರೆಡ್‌ಮಿ ನೋಟ್ 3
* ಲೆನೋವೋ ಕೆ4 ನೋಟ್
* ಸ್ಯಾಮ್‌ಸಂಗ್ ಜೆ7
* ಮೋಟೋ ಜಿ 4
* ಒನ್‌ಪ್ಲಸ್ 3
* ಐಫೋನ್ ಎಸ್ ಈ
* ಗೂಗಲ್ ಪಿಕ್ಸಲ್
* ಲೆನೋವೋ ಕೆ5 ನೋಟ್
 

ವೆಬ್ದುನಿಯಾವನ್ನು ಓದಿ