2025 ರ ವೇಳೆಗೆ ಪ್ರವಾಸೋದ್ಯಮದಿಂದ 4.60 ಕೋಟಿ ಉದ್ಯೋಗ ಸೃಷ್ಠಿ: ರಿಚರ್ಡ್ ವರ್ಮಾ

ಗುರುವಾರ, 30 ಜೂನ್ 2016 (14:02 IST)
ಭಾರತದಲ್ಲಿ ಪ್ರವಾಸೋದ್ಯಮ ವಲಯ ಅತಿ ವೇಗವಾಗಿ ಬೆಳೆಯುತ್ತಿದ್ದು, ಸರಿಯಾದ ರೀತಿಯಲ್ಲಿ ಹೂಡಿಕೆ ಮತ್ತು ನೀತಿಗಳನ್ನು ಮುಂದುವರೆಸಿದರೆ, 2025 ರ ಸಾಲಿನಲ್ಲಿ 46 ಮಿಲಿಯನ್ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಮೆರಿಕಾ ರಾಯಭಾರಿ ರಿಚರ್ಡ್ ವರ್ಮಾ ತಿಳಿಸಿದ್ದಾರೆ.
ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿ (ಡಬ್ಲ್ಯೂಟಿಟಿಸಿ) ಪ್ರಕಾರ, ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯದಲ್ಲಿ ದೇಶದ ಜಿಡಿಪಿಯ ಶೇ 6.3 ರಷ್ಟು ಅಥವಾ 120 ಬಿಲಿಯನ್ ಡಾಲರ್ ಕೊಡುಗೆಯಿಂದ 2015 ರ ಸಾಲಿನಲ್ಲಿ ಸುಮಾರು 37 ಮಿಲಿಯನ್ ಉದ್ಯೋಗವಕಾಶಗಳು ಸೃಷ್ಟಿಯಾಗಿದ್ದವು ಎಂದು ತಿಳಿಸುತ್ತದೆ.
 
ಭಾರತ ಮತ್ತು ಅಮೆರಿಕದ ಮಧ್ಯೆ ಪ್ರವಾಸೋದ್ಯಮದಿಂದಾಗಿ 500 ಬಿಲಿಯನ್ ಡಾಲರ್ ವಹಿವಾಟು ಕುರಿತಂತೆ ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ಸೂಕ್ತ ರೀತಿಯಲ್ಲಿ ಹೂಡಿಕೆ ಮತ್ತು ಪ್ರವಾಸೋದ್ಯಮ ಸ್ನೇಹಿ ನೀತಿಗಳನ್ನು ಮುಂದುವರೆಸಿದರೆ, 2025 ರ ಸಾಲಿನಲ್ಲಿ ಭಾರತ 46 ಮಿಲಿಯನ್ ಉದ್ಯೋಗವನ್ನು ಸೃಷ್ಟಿಸಬಹುದಾಗಿದೆ. 
 
ಭಾರತದಲ್ಲಿ ಪ್ರವಾಸೋದ್ಯಮ ವಲಯ ಬೆಳೆಯುತ್ತಿದೆ. ಆದರೆ, ತೀವ್ರವಾಗಿ ಬೆಳೆಯುತ್ತಿಲ್ಲ. ಭಾರತದಲ್ಲಿ ವಿಮಾನಯಾನ ಮತ್ತು ಪ್ರವಾಸೋದ್ಯಮ ವಲಯದಲ್ಲಿ ಸೂಕ್ತ ಹೂಡಿಕೆಯಿಂದ ಭಾರತದ ಪ್ರವಾಸೋದ್ಯಮ ಬಲ ಪಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ