ಕೆಲಸಕ್ಕೆ ಸಿದ್ದರಾದ ಟೊಯೋಟಾ ಕಾರ್ಮಿಕರು

ಮಂಗಳವಾರ, 22 ಏಪ್ರಿಲ್ 2014 (16:00 IST)
ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಕಿರ್ಲೊಸ್ಕರ್ ಮೊಟರ್‌ ಎಮ್ಪಲಾಯೀಜ್‌‌ ಯೂನಿಯನ್‌‌‌ ಇಂದಿನಿಂದ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. 
 
ಮ್ಯಾನೇಜ್‌‌ಮೆಂಟ್‌‌‌ ಮತ್ತು ಕಾರ್ಮಿಕ ಸಂಘದವರ ಜೊತೆಗೆ ಮಾತನಾಡಿದ ರಾಜ್ಯ ಸರ್ಕಾರ ಬೇಡಿಕೆ  ಇಡೇರಿಸುವ ಭರವಸೆ ನೀಡುವುದರ ಮೂಲಕ ಕೆಲಸಕ್ಕೆ ಹಾಜರಾಗಲು ಸೂಚಿಸಿದೆ.  ಸರ್ಕಾರದ ಆದೇಶದ ಮೇರೆಗೆ ನಾವು 22 ಎಪ್ರಿಲ್‌ನಿಂದ ಕೆಲಸಕ್ಕೆ ಹಾಜರಾಗುತ್ತಿದ್ದೆವೆ ಎಂದು ಕಾರ್ಮಿಕ ಸಂಘ್ ಮುಖ್ಯಸ್ಥ ರಚಿತ್‌ ಎನ್‌ ರಘು  ತಿಳಿಸಿದ್ದಾರೆ. 
 
ವೇತನ ಹೆಚ್ಚಳದ ಬೇಡಿಕೆಯನ್ನಿಟ್ಟು ಕಾರ್ಮಿಕರು ಹೋರಾಟ ನಡೆಸಿದ್ದರು. ಕಂಪೆನಿ ಮಾರ್ಚ್ 16ರಂದು ಕಂಪೆನಿ ಲಾಕ್‌ಔಟ್‌ ಮಾಡುವುದಾಗಿ ಘೋಷಣೆ ಮಾಡಿತ್ತು , ಇದನ್ನು  ಮಾರ್ಚ 24 ರಂದು ಅನ್ವಯವಾಗಿತ್ತು. ಕಾರ್ಮಿಕರ ಬೇಡಿಕೆ ಈರೇಡಿಸುವಲ್ಲಿ ಕಂಪೆನಿ ಸಿದ್ದರಿರಲಿಲ್ಲ, ಆದರೆ ಕಂಪೆನಿ ಮತ್ತು ಕಾರ್ಮಿಕರ ಮಧ್ಯೆ ಸರ್ಕಾರ ಬಂದು ಮಾತುಕತೆ ನಡೆಸಿ ಭರವಸೇ ಈಡೇರಿಸುವ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ