ಇನ್ನೋವಾ ಕ್ರಿಸ್ಟಾ ಭಾರತದ ಮಾರುಕಟ್ಟೆಗೆ ಬಿಡುಗಡೆ

ಮಂಗಳವಾರ, 3 ಮೇ 2016 (10:59 IST)
ನವದೆಹಲಿ: ಟೊಯೊಟಾ ಕಿರ್ಲೊಸ್ಕರ್ ಮೋಟರ್ (ಟಿಕೆಎಮ್), ಹೊಸ ಆವೃತ್ತಿಯ ಬಹು ಉದ್ದೇಶಿತ ಇನ್ನೋವಾ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮುಂಬೈ ಶೋರೂಮ್ ದರ ಹೊರತು ಪಡಿಸಿ ಈ ಆವೃತ್ತಿಯ ಕಾರುಗಳು 20.78 ಲಕ್ಷ ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. 
ಹೊಸ ಆವೃತ್ತಿಯ ಇನ್ನೋವಾ ಕ್ರಿಸ್ಟಾ ಕಾರುಗಳ ಬುಕಿಂಗ್ ಪ್ರಾರಂಭವಾಗಿದ್ದು, ಪ್ರಸಕ್ತ ವರ್ಷದ ಮೇ 13 ರಂದು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು  ಟೊಯೊಟಾ ಕಿರ್ಲೊಸ್ಕರ್ ಮೋಟರ್ ತಿಳಿಸಿದೆ.
 
ಇನ್ನೋವಾ ಕ್ರಿಸ್ಟಾ ಆವೃತ್ತಿಯ ಕಾರುಗಳು 2.4 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 5-ಸ್ವೀಡ್ ಟ್ರಾನ್ಸ್‌ಮಿಷನ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 6-ಸ್ವೀಡ್ ಟ್ರಾನ್ಸ್‌ಮಿಷನ್ ಒಳಗೊಂಡಿರುವ ಎರಡು ವಿಧದ ಎಂಜಿನ್ ಆಯ್ಕೆಯನ್ನು ಹೊಂದಿದೆ. ಮುಂಬೈ ಶೋರೂಮ್ ದರ ಹೊರತು ಪಡಿಸಿ ಈ ಆವೃತ್ತಿಯ ಕಾರುಗಳು 13.84 ಲಕ್ಷ ರೂಪಾಯಿ ಮತ್ತು 20.78 ಲಕ್ಷ ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
 
ಹೊಸ ಆವೃತ್ತಿಯ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಟೊಯೊಟಾ ಕಿರ್ಲೊಸ್ಕರ್ ಮೋಟರ್ ಸಂಸ್ಥೆ, ಭಾರತದ ಮಾರುಕಟ್ಟೆಯಲ್ಲಿ 6 ಲಕ್ಷ ಇನ್ನೋವಾ ಕ್ರಿಸ್ಟಾ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಎಂದು ಟಿಕೆಎಮ್ ವ್ಯವಸ್ಥಾಪಕ ನಿರ್ದೇಶಕ ಅಕಿಟೋ ತಚಿಬಾನಾ ಹೇಳಿದ್ದಾರೆ..
 
ಇನ್ನೋವಾ ಕ್ರಿಸ್ಟಾ 2.4 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 5-ಸ್ವೀಡ್ ಟ್ರಾನ್ಸ್‌ಮಿಷನ್ ಆವೃತ್ತಿಯ ಕಾರುಗಳು ಪ್ರತಿ ಲೀಟರ್ ಇಂಧನಲ್ಲಿ 14.29 ಕಿ.ಮೀಟರ್ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದ್ದು, 2.8 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 6-ಸ್ವೀಡ್ ಟ್ರಾನ್ಸ್‌ಮಿಷನ್ ಆವೃತ್ತಿಯ ಕಾರುಗಳು ಪ್ರತಿ ಲೀಟರ್ ಇಂಧನಲ್ಲಿ 15.10 ಕಿ.ಮೀಟರ್ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ವೆಬ್ದುನಿಯಾವನ್ನು ಓದಿ