ಪಿಎಫ್‌ ಹಿಂದೆಗೆತದಲ್ಲಿ ಟಿಡಿಎಸ್ ಕಡಿತಕ್ಕೆ ಕಾರ್ಮಿಕ ಸಂಘಟನೆಗಳ ವಿರೋಧ

ಶನಿವಾರ, 23 ಮೇ 2015 (12:47 IST)
ಅಕಾಲಿಕ ಪಿಎಫ್ ವಾಪಸಾತಿಗೆ ಟಿಡಿಎಸ್ ಕಡಿತ ಮಾಡುವ ಸರ್ಕಾರದ ನಿರ್ಧಾರವನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸಿದ್ದು, ಕಾನೂನು ಸಚಿವಾಲಯಕ್ಕೆ ಈ ಕುರಿತು ತಡೆ ನೀಡಬೇಕೆಂದು ಕೋರುವುದಾಗಿ ಹೇಳಿವೆ. 
 
ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಪಿಎಫ್ ಸಂಗ್ರಹವು 30,000 ರೂ.ಗಳಿಗಿಂತ ಹೆಚ್ಚಿದ್ದರೆ ಮತ್ತು ನೌಕರ 5 ವರ್ಷಗಳಿಗಿಂತ ಕಡಿಮೆ ಅವಧಿಯ ಕೆಲಸ ಮಾಡಿರುವ ಸಂದರ್ಭದಲ್ಲಿ  ಪಿಎಫ್ ಹಿಂತೆಗೆದುಕೊಂಡಲ್ಲಿ  ಟಿಡಿಎಸ್ ಕಡಿತ ಮಾಡುವುದಾಗಿ ತಿಳಿಸಿತ್ತು. 
 
 ನಾವು ಪಿಎಫ್ ವಾಪಸಾತಿಯಲ್ಲಿ ಟಿಡಿಎಸ್ ಹಿಡಿಯುವ ಸರ್ಕಾರದ ಕ್ರಮವನ್ನು ವಿರೋಧಿಸುತ್ತೇವೆ. ಈ ಪ್ರಕಟಣೆಯನ್ನು ಅಮಾನತಿನಲ್ಲಿಸುವಂತೆ ನಾವು ಕಾರ್ಮಿಕ ಸಚಿವಾಲಯಕ್ಕೆ ಬರೆಯಲು ನಿರ್ಧರಿಸಿದ್ದೇವೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆ ಕಾಂಗ್ರೆಸ್ ಕಾರ್ಯದರ್ಶಿ ಡಿ.ಎಲ್. ಸಚ್‌ದೇವ್ ತಿಳಿಸಿದ್ದಾರೆ. 
 
ಇನ್ನೊಬ್ಬರು ಇಪಿಎಫ್‌ಒ ಟ್ರಸ್ಟಿ ಮತ್ತು ಹಿಂದ್ ಮಜ್ದೂರ್ ಸಭಾ ಕಾರ್ಯದರ್ಶಿ ಎ.ಡಿ. ನಾಗಪಾಲ್, ನಾವು ಈ ಕ್ರಮವನ್ನು ಹಿಂದೆಯೂ ವಿರೋಧಿಸಿದ್ದೆವು. ಇಪಿಎಫ್‌ಒ ಕೂಡ 200000ಕ್ಕಿಂತ ಕಡಿಮೆ ಹಣವಿದ್ದಾಗ ವಿನಾಯಿತಿ ನೀಡಬೇಕೆಂದು ಪ್ರಸ್ತಾಪಿಸಿತ್ತು. ಪಿಎಫ್ ವಾಪಸಾತಿಗೆ ತೆರಿಗೆಯನ್ನು ವಿಧಿಸಬಾರದು ಎಂದು ಹೇಳಿದ್ದಾರೆ. 
 
ಕಾರ್ಮಿಕ ಸಂಘಟನೆ ಅಧ್ಯಕ್ಷ ಪದ್ಮನಾಭನ್, ಹೂಡಿಕೆದಾರರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಅನೇಕ ವಿನಾಯಿತಿಗಳನ್ನು ಸರ್ಕಾರ ನೀಡುವಾಗ, ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಪಿಎಫ್ ಹಿಂತೆಗೆತಗಳಿಗೆ ತೆರಿಗೆ ಹಾಕುವುದು ಸರಿಯಲ್ಲ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ