ಟ್ವಿಟರ್ ಈಗ ಕನ್ನಡ, ಗುಜರಾತಿ, ಮರಾಠಿ, ತಮಿಳಿನಲ್ಲಿ ಲಭ್ಯ

ಶನಿವಾರ, 1 ಆಗಸ್ಟ್ 2015 (20:52 IST)
ಜನಪ್ರಿಯ ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್‌ ಬಳಕೆಗೆ ಇನ್ನೂ ನಾಲ್ಕು ಭಾರತೀಯ ಭಾಷೆಗಳನ್ನು ಸೇರಿದೆ ಎಂದು ಟ್ವಿಟರ್ ಹೇಳಿದೆ.  ಗುಜರಾತಿ, ಕನ್ನಡ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಟ್ವಿಟರ್ ಲಭ್ಯವಿದ್ದು, ಈ ಹೆಚ್ಚುವರಿ ಭಾರತೀಯ ಭಾಷೆಗಳನ್ನು ಬೆಂಬಲಿಸುವುದಕ್ಕಾಗಿ ನಾವು ಟ್ವಿಟರ್ .ಕಾಂ ಮತ್ತು ಆಂಡ್ರಾಯ್ಡ್ ಆಪ್ ಅನ್ನು ನವೀಕರಿಸಿದ್ದೇವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. 
 
 ಬಳಕೆದಾರರು ಯಾವುದೇ ಭಾಷೆಯಲ್ಲಿ ಟ್ವೀಟ್ ಮಾಡಬಹುದಾದರೂ, ಬಳಕೆದಾರ ಇಂಟರ್‌ಫೇಸ್ ಇದುವರೆಗೆ ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಮಾತ್ರ ಲಭ್ಯವಿತ್ತು.

 ಈಗ ಇನ್ನೂ ನಾಲ್ಕು ಹೆಚ್ಚುವರಿ ಭಾಷೆಗಳಲ್ಲಿ ವೆಬ್‌ಸೈಟ್ ಇಂಟರ್‌ಫೇಸ್ ಸೃಷ್ಟಿಸಿದ್ದು, ವೆಬ್‌ಸೈಟ್‌ನ ವಿಶಿಷ್ಠ ಲಕ್ಷಣಗಳಲ್ಲಿ ಟ್ರೆಂಡಿಂಗ್ ಟಾಪಿಕ್ಸ್ ವೀಕ್ಷಿಸುವುದು, ಹ್ಯಾಂಡಲ್ಸ್‌ಗಾಗಿ ಹುಡುಕಾಟ ಮುಂತಾದುವನ್ನು ಪ್ರಾದೇಶಿಕ ಭಾಷೆಗಳಲ್ಲಿ ಮಾಡಬಹುದು. ಪ್ರೊಫೈಲ್ ಸೆಟ್ಟಿಂಗ್ಸ್ ಮೆನುವಿನಿಂದ ಬಳಕೆದಾರ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. 
 

ವೆಬ್ದುನಿಯಾವನ್ನು ಓದಿ