ಟ್ವಿಟ್ಟರ್ ಆದಾಯದಲ್ಲಿ ಶೇ.13 ರಷ್ಟು ಕುಸಿತ

ಶನಿವಾರ, 30 ಏಪ್ರಿಲ್ 2016 (17:07 IST)
ಮೈಕ್ರೋಬ್ಲಾಗಿಂಗ್ ಸೇವೆ ನೀಡುತ್ತಿರುವ ಟ್ವಿಟರ್, ಹೊಸ ವೈಶಿಷ್ಟಗಳನ್ನು ಪರಿಚಯಿಸುವುದರ ಮೂಲಕ ಸಾಕಷ್ಟು ಹೊಸ ಬಳಕೆದಾರರನ್ನು ಆಕರ್ಷಿಸಿದ್ದರು ಸಹ ಮೊದಲ ತ್ರೈಮಾಸಿಕ ಅವಧಿಯಲ್ಲಿ ಆದಾಯ ಕುಸಿಕ ಕಂಡಿದೆ.
ಕಳೆದ ಆರ್ಥಿಕ ವರ್ಷದಲ್ಲಿ 15.34 ಪ್ರತಿಶತ ಆದಾಯ ಹೊಂದಿದ್ದ ಟ್ವಿಟರ್, ಪ್ರಸಕ್ತ ಸಾಲಿನ ತ್ರೈಮಾಸಿಕ ಅವಧಿಯಲ್ಲಿ 13.6 ಕ್ಕೆ ಕುಸಿತ ಕಂಡಿದೆ. ಜಾಹೀರಾತು ವಿಭಾಗದಿಂದ ಆರ್ಥಿಕ ತಜ್ಞರು ನಿರೀಕ್ಷಿಸಿದ ಮಟ್ಟದಲ್ಲಿ ಆದಾಯ ತರುವಲ್ಲಿ ಟ್ವಿಟರ್ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.
 
 ನಾಲ್ಕನೇಯ ತ್ರೈಮಾಸಿಕದಲ್ಲಿ 305 ಮಿಲಿಯನ್ ತಿಂಗಳ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಮಾರ್ಚ್ 31 ರ ಅಂತ್ಯದಲ್ಲಿ 310 ಮಿಲಿಯನ್ ಬಳಕೆದಾರರನ್ನು ತಲುಪಿತ್ತು. ಟ್ವಿಟರ್ ಆದಾಯದಲ್ಲಿ ಕುಸಿತ ಕಂಡಿದ್ದು, ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸಿಆರ್ಟಿ ಕ್ಯಾಪಿಟಲ್‌ನ ಅರವಿಂದ್ ಭಾಟಿಯಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ