ಯು ಟೆಲಿವೆಂಚರ್ಸ್‌ನಿಂದ 8999 ರೂ. ದರದ ಸ್ಮಾರ್ಟ್‌ಫೋನ್ ಬಿಡುಗಡೆ

ಗುರುವಾರ, 18 ಡಿಸೆಂಬರ್ 2014 (17:37 IST)
ಮೈಕ್ರೋಮ್ಯಾಕ್ಸ್ ಇನ್‌ಫಾರ್ಮೆಟಿಕ್ಸ್‌ನ ಸಂಪೂರ್ಣ ಮಾಲೀಕತ್ವದ ಘಟಕ ಯು ಟೆಲಿವೆಂಚರ್ಸ್ ಯುರೇಕಾ ಬ್ರಾಂಡ್ ಅಡಿ ಸಯಾನೊಜೆನ್‌ ಜತೆಗೂಡಿ ತನ್ನ ಪ್ರಥಮ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ದರ 8999 ರೂ.ಗಳು.  

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತು ಮೂಡಿಸುವ ಗುರಿಹೊಂದಿರುವ ಭಾರತದ ಹ್ಯಾಂಡ್‌ಸೆಟ್ ತಯಾರಿಕೆ ಸಂಸ್ಥೆಯ ಉಪಕರಣ 5.5 ಇಂಚ್ ಎಚ್‌ಡಿ ಸ್ಕ್ರೀನ್, 2 ಜಿಬಿ ರಾಮ್, ಎ 53 ಕಾರ್ಟೆಕ್ಸ್, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್, 615 ಓಕ್ಟಾ ಕೋರ್, 64 ಬಿಟ್ ಚಿಪ್‌ಸೆಟ್ ಮತ್ತು 16 ಜಿಬಿ ವಿಸ್ತರಿತ ಮೆಮರಿ ಹೊಂದಿದೆ.

ಡ್ಯುಯಲ್ ಸಿಂ ಎಲ್‌ಟಿಇ ಆಧಾರಿತ ಉಪಕರಣ ಜನವರಿ 8ರಿಂದ ಫ್ಲಾಶ್ ಮಾರಾಟ ಮಾದರಿಯಲ್ಲಿ ಅಮೆಜಾನ್ ಇಂಡಿಯಾದಲ್ಲಿ ಲಭ್ಯವಾಗಲಿದೆ. ಈ ಉಪಕರಣ ಖರೀದಿಗೆ ಅಮೆಜಾನ್ ವೆಬ್‌ಸೈಟ್‌ನಲ್ಲಿ ರಿಜಿಸ್ಟ್ರೇಷನ್ ಶುಕ್ರವಾರ 2 ಗಂಟೆಯಿಂದ ಆರಂಭವಾಗುತ್ತದೆ.

ವೆಬ್ದುನಿಯಾವನ್ನು ಓದಿ