ವಿದೇಶದಲ್ಲಿ ಭಾರತೀಯ ಕರೆನ್ಸಿ ಬಳಕೆಗೆ ಪೇಟಿಎಮ್ ಅವಕಾಶ

ಬುಧವಾರ, 4 ಮೇ 2016 (10:39 IST)
ಡಿಜಿಟಲ್ ಪಾವತಿ ಸೇವೆ ನೀಡುತ್ತಿರುವ ಪೇಟಿಎಮ್, ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ವಿದೇಶದಲ್ಲಿ ಉಬರ್ ಟ್ಯಾಕ್ಸಿ ಸೇವೆ ಪಡೆದುಕೊಳ್ಳುವ ಭಾರತೀಯರು ಸ್ಪದೇಶಿ ಕರೆನ್ಸಿ ಮೂಲಕ ಹಣ ಪಾವತಿ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಿದೆ.
ಈ ಸೇವೆಯನ್ನು ಯಾವುದೇ ಹೆಚ್ಚಿನ ಶುಲ್ಕ ಪಡಿಯದೆ ಅಲಿಬಾಬಾ ಬೆಂಬಲಿತ ಪೇಟಿಎಮ್ ನೀಡುತ್ತಿದ್ದು, ಪ್ರಸ್ತುತ ವಿದೇಶೀ ವಿನಿಮಯ ದರದಲ್ಲಿ ಹಣ ಪಾವತಿ ಮಾಡಬಹುದಾಗಿದೆ. 
 
ಪ್ರಸಕ್ತವಾಗಿ ಭಾರತೀಯ ಪ್ರಯಾಣಿಕರು ವಿದೇಶದಲ್ಲಿ ಉಬರ್ ಸೇವೆಯನ್ನು ಪಡೆದಪಕೊಳ್ಳಲು ಕ್ರಿಡಿಟ್ ಕಾರ್ಡ್‌ ಬಳಕೆ ಮಾಡಬೇಕಾಗಿತ್ತು.
 
ವಿದೇಶದಲ್ಲಿ ಉಬರ್ ಸೇವೆಯನ್ನು ಪಡೆಯಲು ಭಾರತೀಯ ಪ್ರಯಾಣಿಕರು ತಮ್ಮ ಸ್ವದೇಶಿ ಕರೆನ್ಸಿ ಮೂಲಕ ಹಣ ಪಾವತಿ ಮಾಡಬಹುದಾಗಿದ್ದು, ಪ್ರಸ್ತುತ ವಿದೇಶೀ ವಿನಿಮಯ ದರದಲ್ಲಿ ಹಣ ಪಾವತಿ ಮಾಡಬಹುದಾಗಿದೆ ಎಂದು ಪೇಟಿಎಮ್ ಸಿಇಒ ಶೇಖರ್ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ